×
Ad

ಉಪ ಚುನಾವಣೆ: ವೀಕ್ಷಕರ ನೇಮಕ- ದೂರು ಸ್ವೀಕಾರ

Update: 2018-10-23 23:16 IST

ಉಡುಪಿ, ಅ.23: ಕೇಂದ್ರ ಚುನಾವಣಾ ಆಯೋಗ ಅ.6ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿದ್ದು, ಅದರಂತೆ 118-ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಬಂಧ ದೂರುಗಳ ಸ್ವೀಕಾರಕ್ಕಾಗಿ ಬೈಂದೂರು ತಹಶೀಲ್ದಾರರ ಕಚೇರಿಯಲ್ಲಿ ದೂರು ನಿರ್ವಹಣಾ ಸೆಲ್‌ನ್ನು ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿ ಏನಾದರೂ ದೂರುಗಳು ಇದ್ದಲ್ಲಿ, ಸಾರ್ವಜನಿಕರು ದೂರವಾಣಿ ಸಂಖ್ಯೆ: 08254-251657ಗೆ ಕರೆಮಾಡಿ ದೂರು ನೀಡಬಹುದಾಗಿದೆ.

ಅಲ್ಲದೇ ಚುನಾವಣಾ ಆಯೋಗವು, ಚುನಾವಣಾ ವೀಕ್ಷಕರಾಗಿ ಸಂಜಯ ಕುಮಾರ್ ರಾಕೇಶ್‌ರನ್ನು (ದೂ.ಸಂಖ್ಯೆ: 09013900600), ಪೊಲೀಸ್ ವೀಕ್ಷಕರಾಗಿ ಸೊಲೋಮನ್ ಯಶ್‌ಕುಮಾರ್ ಮಿನ್ಜಾರನ್ನು (ದೂ.ಸಂಖ್ಯೆ: 07389941114) ಹಾಗೂ ಚುನಾವಣಾ ಖರ್ಚು ವೆಚ್ಚದ ವೀಕ್ಷಕರನ್ನಾಗಿ ವಿಜಯ ನಾರಾಯಣ ಕೊಠಾರಿ (ದೂ.ಸಂಖ್ಯೆ: 09998994779) ಇವರನ್ನು ನೇಮಕ ಮಾಡಿದೆ.

ಚುನಾವಣಾಗೆ ಸಂಬಂಧಿಸಿದಂತೆ ಮೇಲೆ ತಿಳಿಸಿದ ವೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಬೈಂದೂರು ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News