ಛಾಯಾ ಮುದ್ದುಕಂದ ಫೋಟೋ ಸ್ಪರ್ಧೆ
Update: 2018-10-23 23:24 IST
ಬಂಟ್ವಾಳ, ಅ. 23:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಇದರ ವತಿಯಿಂದ 3ವರ್ಷ ಪ್ರಾಯ ಒಳಗಿನ ಮಕ್ಕಳ ಫೋಟೋಗಳನ್ನು ಆಹ್ವಾನಿಸುತ್ತಿದೆ.
ಮಕ್ಕಳ ಸಹಜ ಆಕರ್ಷಕ ಭಂಗಿಯ 6-9 ಗಾತ್ರದ ಫೋಟೋಗಳಿಗೆ ಅವಕಾಶವಿರುತ್ತದೆ. ಮೊಬೈಲಿನಲ್ಲಿ ತೆಗೆದ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ಒಂದು ಮಗುವಿನ ವಿವಿಧ ಭಂಗಿಯ ಫೊಟೋಗಳನ್ನು ಕಳುಹಿಸಬಹುದಾಗಿದೆ. ಫೋಟೊಗಳನ್ನು ನ. 9ರೊಳಗೆ ಬಿ.ಸಿ.ರೋಡ್‍ನ ಪ್ರೀತಿ ಸ್ಟುಡಿಯೋ ಪದ್ಮಾ ಕಾಂಪ್ಲೆಕ್ಸ್ ಇಲ್ಲಿಗೆ ತಲುಪಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.