ರೋಟರಿ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ : ಬಂಟ್ವಾಳ ರೋಟರಿ ಕ್ಲಬ್ ರನ್ನರ್ಸ್‍ಅಪ್
ಬಂಟ್ವಾಳ, ಅ. 23: ಬೆಳ್ತಂಗಡಿ ರೋಟರೀ ಕ್ಲಬ್‍ನ ಆತಿಥ್ಯದಲ್ಲಿ ಇತ್ತೀಚೆಗೆ ಉಜಿರೆಯ ಎಸ್‍ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನ ಸಭಾಭವನದಲ್ಲಿ ನಡೆದ ರೋಟರಿ ಜಿಲ್ಲೆ 3181, ರೋಟರಿ ವಲಯ4ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಂಟ್ವಾಳ ರೋಟರಿ ಕ್ಲಬ್ 10 ಬಹುಮಾನಗಳನ್ನು ಗಳಿಸುವುದರ ಮೂಲಕ ಪ್ರಥಮ ರನ್ನರ್ಸ್ ಅಪ್ ಆಗಿ ಮೂಡಿಬಂದಿದೆ.
11 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ 10 ಬಹುಮಾನಗಳನ್ನು ಪಡೆದುಕೊಂಡಿದ್ದು, ತನ್ನ 50ನೆ ವರ್ಷಾಚರಣೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಂಡಿದೆ.
ರೊಟೇರಿಯನ್ ಗಾಯನ ಸ್ಪರ್ಧೆಯಲ್ಲಿ ಬಸ್ತಿ ಮಾಧವ ಶೆಣೈ ತೃತೀಯ ಬಹುಮಾನ, ಆ್ಯನ್ಸ್ ವಿಭಾಗದ ಹಾಡುಗಾರಿಕೆಯಲ್ಲಿ ಪ್ರೇಮಲತಾ ರಾವ್ ದ್ವಿತೀಯ, 14 ವರ್ಷದ ಮೇಲ್ಪಟ್ಟ ಆ್ಯನೆಟ್ಸ್ ಗಾಯನ ಸ್ಪರ್ಧೆಯಲ್ಲಿ ಅಶ್ವಿನಿ ಬಾಳಿಗಾ ಪ್ರಥಮ, 14 ವರ್ಷಕ್ಕಿಂತ ಕೆಳಗಿನ ಆ್ಯನೆಟ್ಸ್ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಪ್ರಣಮ್ಯ ರಾವ್ ತೃತೀಯ, ಯುಗಳ ಗೀತೆ ಸ್ಪರ್ಧೆಯಲ್ಲಿ ಬಸ್ತಿ ಮಾಧವ ಶೆಣೈ ಹಾಗೂ ಮಹಿಮಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
14 ವರ್ಷದ ಮೇಲ್ಪಟ್ಟ ಆ್ಯನೆಟ್ಸ್ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಅಶ್ವಿನಿ ಬಾಳಿಗಾ ತೃತೀಯ, 14 ವರ್ಷಕ್ಕಿಂತ ಕೆಳಗಿನ ಆ್ಯನೆಟ್ಸ್ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಪ್ರಣಮ್ಯ ರಾವ್ ಪ್ರಥಮ ಸ್ಥಾನಗಳಿಸಿದ್ದಾರೆ.
ಸಮೂಹ ಗಾನ ಸ್ಪರ್ಧೆಯಲ್ಲಿ ಬಂಟ್ವಾಳ ರೋಟರಿ ಕ್ಲಬ್ ದ್ವಿತೀಯ ಬಹುಮಾನ ಹಾಗೂ ಮೂಕಾಭಿನಯದಲ್ಲಿ ತೃತೀಯ ಸ್ಥಾನ ಗಳಿಸಿದೆ. ಪ್ರಹಸನ ವಿಭಾಗದಲ್ಲಿ ಬಂಟ್ವಾಳ ರೋಟರೀ ಕ್ಲಬ್ ಪ್ರಸ್ತುತ ಪಡಿಸಿದ "ಅಯ್ಯೋ ನೇತ್ರಾವತಿ" ಪ್ರಥಮ ಸ್ಥಾನಗಳಿಸಿ, ಸೋಮವಾರ ಪೇಟೆಯಲ್ಲಿ ನಡೆಯಲಿರುವ ರೋಟರೀ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಬಂಟ್ವಾಳ ರೋಟರೀಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಕಾರ್ಯದರ್ಶಿ ಶಿವಾನಿಬಾಳಿಗಾ ನೇತೃತ್ವದಲ್ಲಿ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಬಂಟ್ವಾಳ ರೋಟರೀಕ್ಲಬ್‍ನ 30ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು.
ವಲಯ 4ರ ಉಪರಾಜ್ಯಪಾಲ ಪ್ರಕಾಶ್ ಕಾರಂತ್, ಬಂಟ್ವಾಳ ರೋಟರಿ ಆ್ಯನ್ಸ್ ಅಧ್ಯಕ್ಷೆ ವಿದ್ಯಾ ಎ.ರೈ ಕೂಡ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಾಥ್ ನೀಡಿ ಸದಸ್ಯರಿಗೆ ಹುರುಪು ತುಂಬಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಪ್ರಸಾದ್, ವಲಯ ಕೋ ಆರ್ಡಿನೇಟರ್ ಶ್ರೀಕಾಂತ್ ಕಾಮತ್, ವಲಯ ಲೆಫ್ಟಿನೆಂಟ್ ಡಾ.ಸುಧೀರ್ ಪ್ರಭು ಉಪಸ್ಥಿತರಿದ್ದರು.