ರೂಪಾಯಿ ಸಂಕಷ್ಟ:ಆರು ತಿಂಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದ ಶೇರು ಮಾರುಕಟ್ಟೆ

Update: 2018-10-23 18:03 GMT

ಮುಂಬೈ,ಅ.23: ರೂಪಾಯಿ ಅಪಮೌಲ್ಯದ ಕುರಿತು ಕಳವಳದಿಂದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಔಷಧಿ ಕ್ಷೇತ್ರಗಳ ಶೇರುಗಳ ಕುಸಿತ,ಜಾಗತಿಕ ವ್ಯಾಪಾರ ಸಮರ ಮತ್ತು ಭೂ-ರಾಜಕೀಯ ಉದ್ವಿಗ್ನತೆಗಳು ಮರುಕಳಿಸಿದ ಪರಿಣಾಮ ಮಂಗಳವಾರ ಭಾರತೀಯ ಶೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ನಾಲ್ಕನೇ ದಿನವೂ ಇಳಿತದ ಹಾದಿಯಲ್ಲಿ ಸಾಗಿ ಕಳೆದ ಆರು ತಿಂಗಳುಗಳಲ್ಲಿ ಕನಿಷ್ಠ ಮಟ್ಟವನ್ನು ತಲುಪಿವೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 287.15 ಅಂಶಗಳಷ್ಟು ಕುಸಿದು 33,847.23ಕ್ಕೆ ದಿನದಾಟ ಮುಗಿಸಿದ್ದು,ಇದು ಎ.10ರ ಬಳಿಕ ಕನಿಷ್ಠ ಮಟ್ಟವಾಗಿದೆ, ಇದೇ ರೀತಿ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 98.45 ಅಂಶಗಳಷ್ಟು ಇಳಿಕೆ ಕಂಡು 10,146.80ರಲ್ಲಿ ಮುಕ್ತಾಯಗೊಂಡಿದ್ದು,ಇದು ಎ.4ರ ನಂತರದ ಕನಿಷ್ಠ ಮಟ್ಟವಾಗಿದೆ.

ತನ್ಮಧ್ಯೆ ಮಧ್ಯಂತರ ವಹಿವಾಟಿನಲ್ಲಿ ಡಾಲರ್‌ನೆದುರು 73.82ಕ್ಕೆ ಕುಸಿದಿದ್ದ ರೂಪಾಯಿ ಸಂಜೆಯ ವೇಳೆಗೆ 73.56ಕ್ಕೆ ಚೇತರಿಸಿಕೊಂಡಿದೆ.ರೂಪಾಯಿ ಕುಸಿತ,ಸೌದಿ ಪತ್ರಕರ್ತ ಖಶ್ಶೋಗಿ ಸಾವು,ಬ್ರೆಕ್ಸಿಟ್ ಮತ್ತು ಇಟಲಿ ಬಜೆಟ್‌ನ ಸಂಭಾವ್ಯ ಉಲ್ಲಂಘನೆ ಇವು ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತೆ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News