ಕೆ ಎಸ್ ಸಿ ಎ: ಅಂತರ್ ಪಿಯು ಕಾಲೇಜು ಕ್ರಿಕೆಟ್ ಪಂದ್ಯಾಟ
Update: 2018-10-23 23:38 IST
ಮಣಿಪಾಲ,ಅ.23 : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಸರೆಯಲ್ಲಿ ಜರಗುತ್ತಿರುವ ಅಂತರ್ ಪಿ.ಯು ಕ್ರಿಕೆಟ್ ಪಂದ್ಯಾಟದ ಲೀಗ್ ಹಂತದ ಪಂದ್ಯಗಳಲ್ಲಿ ಗುಂಪಿನಲ್ಲಿ ತಲಾ ಎಂಟು ಅಂಕಗಳೊಂದಿಗೆ ಅಗ್ರ ಎರಡು ಸ್ಥಾನಗಳನ್ನು ಪಡೆದ ಮಣಿಪಾಲದ ಮಾಧವಕೃಪಾ ಮತ್ತು ಕುಂದಾಪುರದ ವೆಂಕಟರಮಣ ಪಿ.ಯು. ಕಾಲೇಜು ತಂಡಗಳು ಫೈನಲ್ ಪ್ರವೇಶವನ್ನು ಕಂಡಿವೆ.
ಅಂತಿಮ ಪಂದ್ಯವು ಇಂದು ಮಾಹೆ ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ಜರಗಲಿದೆ.