ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಭಾರತ-ಮಲೇಶ್ಯಾ ಪಂದ್ಯ ಗೋಲುರಹಿತ ಡ್ರಾ

Update: 2018-10-24 05:07 GMT

ಹೊಸದಿಲ್ಲಿ, ಅ.24: ಮಸ್ಕತ್‌ನಲ್ಲಿ ಸೋಮವಾರ ಪುರುಷರ ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಮಲೇಶ್ಯಾ ನಡುವೆ ನಡೆದ ಲೀಗ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ತನ್ನ ತಪ್ಪಿನಿಂದಾಗಿ ಹಲವು ಬಾರಿ ಗೋಲು ಬಾರಿಸುವ ಅವಕಾಶ ವಂಚಿತವಾದ ಭಾರತ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಈ ಫಲಿತಾಂಶದ ಬಳಿಕವೂ ಭಾರತ ಲೀಗ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿರುವ ಮಲೇಶ್ಯಾ ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳು 4 ಪಂದ್ಯಗಳ ಪೈಕಿ 3ರಲ್ಲಿ ಜಯ ಹಾಗೂ ಒಂದರಲ್ಲಿ ಡ್ರಾ ಸಾಧಿಸಿ ತಲಾ 10 ಅಂಕ ಗಳಿಸಿವೆ. ಈಗಾಗಲೇ ಸೆಮಿ ಫೈನಲ್ ಸ್ಥಾನವನ್ನು ದೃಢಪಡಿಸಿವೆ.

 ಭಾರತ ಏಶ್ಯನ್ ಗೇಮ್ಸ್‌ನ ಸೆಮಿ ಫೈನಲ್‌ನಲ್ಲಿ ಮಲೇಶ್ಯಾಕ್ಕೆ ಸೋಲುಂಡಿತ್ತು. ಆ ಸೋಲಿನ ನೋವಿನಿಂದ ಹೊರಬರಲು ಯತ್ನಿಸಿದರೂ ಅದರಲ್ಲಿ ಯಶಸ್ಸು ಕಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News