ರಾಜ್ಯಮಟ್ಟದ ಟ್ವೆಕಾಂಡೋ ಚಾಂಪಿಯನ್‌ಶಿಪ್: ದ.ಕ. ಜಿಲ್ಲಾ ತಂಡಕ್ಕೆ 2 ಚಿನ್ನ, 2 ಕಂಚು

Update: 2018-10-24 08:29 GMT

ಬಂಟ್ವಾಳ, ಅ.24: ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ನಡೆದ 36ನೆ ರಾಜ್ಯಮಟ್ಟದ ಕೆಡೆಟ್ ಜೂನಿಯರ್ ಹಾಗೂ ಸೀನಿಯರ್ ಟ್ವೆಕಾಂಡೋ ಚಾಂಪಿಯನ್ ಶಿಪ್‌ನಲ್ಲಿ ದ.ಕ. ಜಿಲ್ಲಾ ಟ್ವೆಕಾಂಡೋ ತಂಡವು ಎರಡು ಚಿನ್ನ ಹಾಗೂ 2 ಕಂಚಿನ ಪದಕಗಳನ್ನು ಜಯಿಸಿದೆ.

ಸೀನಿಯರ್ ಮಹಿಳಾ ಅಂಡರ್ 62 ಕೆ.ಜಿ. ವಿಭಾಗದಲ್ಲಿ ದೇರಳಕಟ್ಟೆ ಯೆನೆಪೊಯ ವಿವಿಯ ಫಿಸಿಯೊಥೆರಫಿ ವಿದ್ಯಾರ್ಥಿನಿ ಆರ್. ರಕ್ಷಯಾ ಹಾಗೂ ಪುರುಷರ ಅಂಡರ್ 57 ಕೆ.ಜಿ. ವಿಭಾಗದಲ್ಲಿ ಬಂಟ್ವಾಳದ ಮುಹಮ್ಮದ್ ರಾಫಿ ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜೂನಿಯರ್ ಪುರುಷರ 55 ಕೆ.ಜಿ. ವಿಭಾಗದಲ್ಲಿ ಅಬ್ದುಲ್ಲಾ ಬೆಂಗರೆ ಹಾಗೂ ಸಬ್ ಜೂನಿಯರ್ ಪುರುಷರ 44 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ಶಿಫಾನ್ ಬ್ರಹ್ಮರಕೂಟ್ಲು ಕಂಚಿನ ಪದಕ ಗಳಿಸಿದ್ದಾರೆ. ದ.ಕ. ಜಿಲ್ಲಾ ತಂಡದ ಕ್ರೀಡಾಳುಗಳಿಗೆ ಜಿಲ್ಲಾ ಟ್ವೆಕಾಂಡೋ ಅಸೋಶಿಯೇಶನ್‌ನ ಇಬ್ರಾಹೀಂ ನಂದಾವರ, ಆಸಿಫ್ ಕಿನ್ಯಾ ಹಾಗೂ ಇಸ್ಹಾಕ್ ನಂದಾವರ ತರಬೇತಿ ನೀಡಿದ್ದಾರೆ.

ನವಂಬರ್‌ನಲ್ಲಿ ಒಡಿಶಾದಲ್ಲಿ ನಡೆಯುವ 37ನೆ ರಾಷ್ಟ್ರೀಯ ಸೀನಿಯರ್ ಪೈಟಿಂಗ್ ಟ್ವೆಕಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಯೆನೆಪೊಯ ವಿವಿ ಫಿಸಿಯೋಥೆರಪಿ ವಿದ್ಯಾರ್ಥಿನಿ ಆರ್. ರಕ್ಷಯಾ ಹಾಗೂ ಅಸ್ಸಾಮಿನ ಗುವಾಹಟಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕೆಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಬಂಟ್ವಾಳದ ಮುಹಮ್ಮದ್ ರಾಫಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ತರಬೇತುದಾರ ಇಸ್ಹಾಕ್ ನಂದಾವರ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News