ಮಂಗಳೂರು ಅದ್ವೈತ್ ಹುಂಡೈ ನ್ಯೂ ಸ್ಯಾಂಟ್ರೊ 2018 ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಅ.24: ಹುಂಡೈ ಕಾರು ಮಾರಾಟ ಕ್ಷೇತ್ರವು ಕರ್ನಾಟಕದಲ್ಲಿ ಮೊದಲನೆಯ ಸ್ಥಾನದಲ್ಲಿರುವ ಮಂಗಳೂರಿನಲ್ಲಿ ಮನೆ ಮಾತಾಗಿರುವ ಅದ್ವೈತ್ ಹುಂಡೈನಲ್ಲಿ ಬಹು ನಿರೀಕ್ಷೆಯ ನೂತನ ಸ್ಯಾಂಟ್ರೊ ಕಾರನ್ನು ನಗರದ ಕುಂಟಿಕಾನದಲ್ಲಿರುವ ಅದ್ವೈತ್ ಹುಂಡೈ ಶೋರೂಂನಲ್ಲಿ ಬುಧವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ನೂತನ ಕಾರನ್ನು ಚಲನಚಿತ್ರರಂಗದ ಉದಯೋನ್ಮುಖ ನಟಿ ಸೀಮಾ ಬೊತೆಲ್ಲೊ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಆನಂತರ ಸುಮಾರು 55 ಗ್ರಾಹಕರಿಗೆ ನ್ಯೂ ಸ್ಯಾಂಟ್ರೊ ಕೀಯನ್ನು ಹಸ್ತಾಂತರಿಸಿದರು.
ಅದ್ವೈತ್ ಹುಂಡೈಯ ಕರ್ನಾಟಕದಲ್ಲಿ ಸುಮಾರು 22 ಶೋರೂಂ ಹಾಗೂ 26 ಸರ್ವಿಸ್ ಸೆಂಟರ್‌ಗಳನ್ನು ಹೊಂದಿದೆ. ನೂತನ ಸ್ಯಾಂಟ್ರೊ ಕಾರಿನಲ್ಲಿ ಮಾಡರ್ನ್ ಸ್ಟೈಲಿಶ್ ಟಾಲ್ ಬಾಯ್ ಡಿಸೈನ್ ನ್ಯೂ ಏಜ್ ಟೆಕ್ನಾಲಜಿ, ಸೇಫ್ಟಿ ಹಾಗೂ ಆಲ್‌ರೌಂಡ್ ಪರ್ಫಾಮೆನ್ಸ್ ಮತ್ತು ಕಂಪ್ಲೀಟ್ ಫೀಸ್ ಆಫ್ ಮೈಟ್ ಹೊಂದಿದೆ.
ಈ ನೂತನ ಸ್ಯಾಂಟ್ರೊ ಇಂಜಿನ್ ನಾಲ್ಕು ಸಿಲಿಂಡರ್ ಹೊಂದಿರುವಂತಹ 1.1 ಲೀಟರ್ ಮ್ಯಾನುವಲ್ ಹಾಗೂ ನೂತನ ಸ್ಮಾರ್ಟ್ ಅಟೋ ಗೇರ್‌ಗಳೊಂದಿಗೆ ಬೆಸ್ಟ್ ಇನ್ ಸೆಗ್‌ಮೆಂಟ್ ಫೀಚರ್ಸ್‌ಗಳಾದ 17.64 ಸಿಮ್ ಟಚ್ ಸ್ಕ್ರೀನ್ ಜೊತೆ ಆಡಿಯೋ ವೀಡಿಯೊ ಸಿಸ್ಟಮ್ ಹಾಗೂ ವಾಯ್ಸ್ ರೆಕೊಗ್‌ನಿಷನ್ ಮತ್ತು ಬ್ಯಾಕ್ಟೀರಿಯ ಫ್ರೀ ಏಸಿ ಹಾಗೂ ಎಬಿಎಸ್, ಇಬಿಡಿ ಮತ್ತು ಏರ್‌ಬ್ಯಾಗ್ ಸ್ಟಾಂಡರ್ಡ್ ಆಗಿರುತ್ತದೆ.
ನೂತನ ಸ್ಯಾಂಟ್ರೊ ಫೀಸ್ ಆಫ್ ಮೈಂಡ್ ಆಗಿದ್ದು, 3 ವರ್ಷಗಳಲ್ಲಿ 1,00,000 ಕಿ.ಮೀ. ವ್ಯಾರಂಟಿ 3 ವರ್ಷಗಳಲ್ಲಿ ರೋಡ್ ಸೈಡ್ ಎಸಿಸ್ಟಂಟ್‌ಗಳು ಬೆಸ್ಟ್ ಇನ್ ಸೆಗ್‌ಮೆಂಟ್‌ಗಳಾಗಿದ್ದು, ಕಡಿಮೆ ದರದ ಮೈಂಟೆನೆನ್ಸ್‌ಗಳೊಂದಿಗೆ ಮತ್ತಿತರ ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಅದ್ವೈತ್ ಹುಂಡೈನ ಬ್ರಾಂಚ್ ಮ್ಯಾನೇಜರ್ ಶಿವಪ್ರಸಾದ್, ಸರ್ವಿಸ್ ಜನರಲ್ ಮ್ಯಾನೇಜರ್ ಶಶಿಕಾಂತ್ ಶೆಟ್ಟಿ, ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಶೋ ರೂಂ ಮ್ಯಾನೇಜರ್ ರಾಜೇಶ್ ಉಳ್ಳಾಲ್, ಸೇಲ್ಸ್ ಮ್ಯಾನೇಜರ್‌ಗಳಾದ ಹರ್ಷರಾಜ್ ಹಾಗೂ ಮೀನಾ ರೇಗೋ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಹಾಗೂ ಚೇತನಾ ಪ್ರಾರ್ಥಿಸಿದರು. ಶಿವಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿದರು. ಸುಧಾಕರ್ ವಂದಿಸಿದರು. ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು.