ಅಕ್ರಮ ಮರಳು ಶೇಖರಣೆ: ಉಳ್ಳಾಲ ಪೊಲೀಸರ ದಾಳಿ; ಸೊತ್ತು ವಶ
ಉಳ್ಳಾಲ, ಅ. 24: ಅಕ್ರಮವಾಗಿ ಮರಳು ಸಂಗ್ರಹಿಸಿ ಶೇಖರಿಸಿಟ್ಟ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿಜ ಉಳ್ಳಾಲ ಇನ್ಸ್‍ಪೆಕ್ಟರ್ ಗೋಪಿ ಕೃಷ್ಣ ನೇತೃತ್ವದ ತಂಡ 40 ಲೋಡು ಮರಳು ಮತ್ತು 16 ಬೋಟುಗಳನ್ನು ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯಲ್ಲಿ ನಡೆದಿದೆ.
ಆರೋಪಿಗಳು ಬೋಟನ್ನು ಬಳಸಿಕೊಂಡು ಬೆಟ್ಟಂಪಾಡಿಯಲ್ಲಿ ಸಮುದ್ರದಿಂದ ಮರಳನ್ನು ತೆಗೆದು ತಲಪಾಡಿಯಲ್ಲಿ ಶೇಖರಣೆ ಮಾಡಿಡುತ್ತಿದ್ದರು ಎನ್ನಲಾಗಿದೆ. ಬೋಟ್‍ಗಳನ್ನು ಬಳಸಿ ಮರಳು ತೆಗೆಯುತ್ತಿದ್ದ ಆರೋಪಿಗಳು ತಲಪಾಡಿಯಿಂದ ಕೇರಳಕ್ಕೆ ಅಕ್ರಮವಾಗಿ ಕಳುಹಿಸುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿ ಪಡೆದ ಉಳ್ಳಾಲ ಇನ್ಸ್‍ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ. ಅವರು ಶೇಖರಿಸಿಟ್ಟ 40 ಲೋಡ್ ಮರಳು ಮತ್ತು 16 ಬೋಟ್‍ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳು ಕೆಲವು ಸಮಯದಿಂದ ಸಮುದ್ರದಿಂದ ಅಕ್ರಮವಾಗಿ ಮರಳು ತೆಗೆಯುವ ಕಾರ್ಯ ಮಾಡುತ್ತಿದ್ದರೆನ್ನಲಾಗಿದೆ.