ಕ್ಷಿಪಣಿ ವ್ಯವಸ್ಥೆಗಳ ಪೂರೈಕೆಗೆ ಇಸ್ರೇಲ್ ಜೊತೆ ಭಾರತ ಒಪ್ಪಂದ

Update: 2018-10-24 16:48 GMT

ಜೆರುಸಲೇಮ್, ಅ. 24: ಭಾರತೀಯ ನೌಕಾಪಡೆಯ 7 ನೌಕೆಗಳಿಗೆ ‘ಬರಾಕ್ 8 ಎಲ್‌ಆರ್-ಎಸ್‌ಎಎಂ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆ’ಗಳನ್ನು ಪೂರೈಸುವುದಕ್ಕಾಗಿ ಭಾರತ ಇಸ್ರೇಲ್‌ನ ಪ್ರಮುಖ ಆಯುಧ ಉತ್ಪಾದಕ ಕಂಪೆನಿಯೊಂದಿಗೆ 777 ಮಿಲಿಯ ಡಾಲರ್ (ಸುಮಾರು 5,700 ಕೋಟಿ ರೂಪಾಯಿ) ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ದೀರ್ಘ ವ್ಯಾಪ್ತಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಯನ್ನು ಇಸ್ರೇಲ್ ಮತ್ತು ಭಾರತಗಳ ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಗಳು ಬಳಸುತ್ತಿವೆ.

ಈ ಒಪ್ಪಂದವು ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಭಾಗೀದಾರಿಕೆಯ ಸೂಚನೆಯಾಗಿದೆ ಹಾಗೂ ಇದಕ್ಕೆ ಸಂಬಂಧಿಸಿದ ವ್ಯವಹಾರವು ಕಳೆದ ಹಲವು ವರ್ಷಗಳಲ್ಲಿ 6 ಬಿಲಿಯ ಡಾಲರ್ (ಸುಮಾರು 43,900 ಕೋಟಿ ರೂಪಾಯಿ)ನ್ನು ದಾಟಿದೆ ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ತಿಳಿಸಿದೆ.

ಸಾಗರ ಪ್ರದೇಶದಲ್ಲಿ ಆಕಾಶ, ಸಮುದ್ರ ಮತ್ತು ಭೂಮಿಯಿಂದ ಎದುರಾಗಬಹುದಾದ ವಿಶಾಲ ವ್ಯಾಪ್ತಿಯ ಬೆದರಿಕೆಗಳಿಗೆ ಈ ಕ್ಷಿಪಣಿ ವ್ಯವಸ್ಥೆಯು ರಕ್ಷಣೆ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News