ಪತ್ರಕರ್ತ ಖಶೋಗಿ ಹತ್ಯೆಯ ಹಿಂದೆ ಸೌದಿ ರಾಜಕುಮಾರನ ಪಾತ್ರವಿರಬಹುದು: ಟ್ರಂಪ್
Update: 2018-10-24 22:24 IST
ಇಸ್ತಾಂಬುಲ್, ಅ.24: ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದ ಕಾರ್ಯಾಚರಣೆಗೆ ಸೌದಿ ಅರೇಬಿಯಾದ ರಾಜಕುಮಾರ ಸಂಪೂರ್ಣ ಜವಾಬ್ದಾರರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಕೂಡ ಒಳಗೊಂಡಿರಬಹುದು ಎಂದವರು ಹೇಳಿದರು. ಈ ಪ್ರಕರಣ ಸುದ್ದಿಯಾದಂದಿನಿಂದ ಸಲ್ಮಾನ್ ಬಗ್ಗೆ ಟ್ರಂಪ್ ನೀಡುತ್ತಿರುವ ನೇರ ಹೇಳಿಕೆ ಇದಾಗಿದೆ.
ಹತ್ಯೆಗೆ ಕಾರಣವಾದ ಸೌದಿ ಅಧಿಕಾರಿಗಳ ವೀಸಾಗಳನ್ನು ರದ್ದುಪಡಿಸುವ ಮೂಲಕ ಅವರನ್ನು ಶಿಕ್ಷಿಸಲು ಮೊದಲ ಹಂತದ ಕ್ರಮಗಳನ್ನು ತನ್ನ ಸರಕಾರ ತೆಗೆದುಕೊಳ್ಳಲು ಮುಂದಾಗಿದೆ ಹಾಗೂ ಹೆಚ್ಚಿನ ಕ್ರಮಗಳನ್ನು ಮುಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ನುಡಿದರು.