ಅ. 27ರಂದು ಯೆನೆಪೊಯ ಘಟಿಕೋತ್ಸವ
ಮಂಗಳೂರು, ಅ.25: ಯೆನೆಪೊಯ ವಿಶ್ವವಿದ್ಯಾನಿಲಯದ 8ನೇ ವಾರ್ಷಿಕ ಘಟಿಕೋತ್ಸವವು ಯೆನೆಪೊಯ ವಿವಿ ಆವರಣದಲ್ಲಿರುವ ಯೆನ್‌ಡ್ಯುರೆನ್ಸ್ ಸಭಾಂಗಣದಲ್ಲಿ ಅ.27ರಂದು ಪೂರ್ವಾಹ್ನ 10:15ಕ್ಕೆ ನಡೆಯಲಿದೆ.
ಸಮಾರಂಭದಲ್ಲಿ ಪಿಎಚ್‌ಡಿ, ಎಂಸಿಎಚ್/ಡಿಎಂ, ಎಂಡಿ/ಎಂಎಸ್, ಎಂಡಿಎಸ್, ಎಂಎಸ್ಸಿ(ಶುಶ್ರೂಷೆ), ಎಂಪಿಟಿ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ (ಶುಶ್ರೂಷೆ) ಹಗೂ ಬಿಪಿಟಿ ಪದವೀಧರರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞ ವಹಿಸಿ, ಪದವಿ ಪ್ರದಾನ ಮಾಡಲಿದ್ದಾರೆ. ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಜೋಧ್ಪುರ್ ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಂಜೀವ್ ಮಿಶ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೃಷ್ಣ ವೈದ್ಯಕೀಯ ಶಿಕ್ಷಣ ಸಂಸ್ಥೆ ಕರಾಡ್ ಕುಲಾಧಿಪತಿ ಡಾ. ವೇದ್‌ಪ್ರಕಾಶ್ ಮಿಶ್ರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯೆನೆಪೊಯ ವಿವಿ ರಿಜಿಸ್ಟ್ರಾರ್ ಡಾ. ಗಂಗಾಧರ ಸೊಮಯಾಜಿ ಕೆ.ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.