ಅಮೆರಿಕದ ಇಂಧನ ಆಯೋಗದ ಮುಖ್ಯಸ್ಥರಾಗಿ ಭಾರತೀಯ ಅಮೆರಿಕನ್
Update: 2018-10-25 19:44 IST
ವಾಶಿಂಗ್ಟನ್, ಅ. 25: ಅಮೆರಿಕದ ಕೇಂದ್ರೀಯ ಇಂಧನ ನಿಯಂತ್ರಣ ಆಯೋಗ (ಎಫ್‌ಇಆರ್‌ಸಿ)ದ ಅಧ್ಯಕ್ಷರನ್ನಾಗಿ ಭಾರತೀಯ ಅಮೆರಿಕನ್ ನೀಲ್ ಚಟರ್ಜಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನೇಮಿಸಿದ್ದಾರೆ.
ಅಮೆರಿಕದ ವಿದ್ಯುತ್ ಜಾಲದ ಮೇಲುಸ್ತುವಾರಿ ನೋಡಿಕೊಳ್ಳುವ ಹಾಗೂ ಬಿಲಿಯಗಟ್ಟಳೆ ಡಾಲರ್ ವೆಚ್ಚದ ಇಂಧನ ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಆಯೋಗ ಹೊಂದಿದೆ.
ಪ್ರಸಕ್ತ ಆಯೋಗದ ಕಮಿಶನರ್ ಆಗಿರುವ ಚಟರ್ಜಿ, ಇನ್ನು ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷ ಕೆವಿನ್ ಮೆಕ್ಲಿನ್‌ಟಯರ್ ಅವರ ಸ್ಥಾನವನ್ನು ತುಂಬುತ್ತಾರೆ.ಮೆಕ್ಲಿನ್‌ಟಯರ್ ತನ್ನ ಹುದ್ದೆಗೆ ಅಕ್ಟೋಬರ್ 22ರಂದು ರಾಜೀನಾಮೆ ನೀಡಿದ್ದಾರೆ ಹಾಗೂ ತನ್ನ ಈ ನಿರ್ಧಾರಕ್ಕೆ ಆರೋಗ್ಯದ ಕಾರಣ ನೀಡಿದ್ದಾರೆ.