×
Ad

ಅ. 27-28: ಹೋಮಿಯೋಪಥಿ ಸಮ್ಮೇಳನ

Update: 2018-10-25 21:03 IST

ಮಂಗಳೂರು, ಅ. 25: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಅ.27 ಮತ್ತು ಅ.28ರಂದು 23ನೇ ರಾಷ್ಟ್ರೀಯ ವಾರ್ಷಿಕ ಹೋಮಿಯೋಪಥಿ ಸಮ್ಮೇಳನ ‘ಡೆಸೆನಿಯಮ್ 2018’ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಸಹ ಆಡಳಿತಾಧಿಕಾರಿ ರೆ.ಫಾ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಅ.27ರಂದು ಪೂರ್ವಾಹ್ನ 10 ಗಂಟೆಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ.ಆಯುಷ್ ನವದೆಹಲಿ ಇದರ ಹೋಮಿಯೋಪಥಿ ವಿಭಾಗದ ಸದಸ್ಯ ಡಾ.ಎನ್.ಎಲ್.ತಿವಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿನಾಯಕ ಮಿಷನ್ ಸಂಶೋಧನಾ ಪ್ರತಿಷ್ಠಾನ ವಿಶ್ವವಿದ್ಯಾಲಯ ಸೇಲಮ್ ಇದರ ಉಪಕುಲಪತಿ ಡಾ.ಪಿ.ಕೆ.ಸುಧೀರ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

33 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮಹಾವಿದ್ಯಾಲಯವು 2008ರಲ್ಲಿ ಪ್ರಾರಂಭವಾದ ಹೋಮಿಯೋಪಥಿ ಸ್ನಾತಕೋತ್ತರ ಪದವಿಯ ದಶಕದ ಸಂಭ್ರಮವನ್ನು ಆಚರಿಸುತ್ತಿದೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ವೈಜ್ಞಾನಿಕ ಚರ್ಚೆ ನಡೆಯಲಿದೆ. ಮೋತಿವಾಲ ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯ ನಾಸಿಕ್ ಇಲ್ಲಿನ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ತಪಸ್ ಕುಮಾರ್ ಕುಂಡು ಮೊದಲನೇ ದಿನ ಚರ್ಚೆ ನಡೆಸಿಕೊಡಲಿದ್ದಾರೆ. ಎರಡನೇ ದಿನ ಮೂರು ವಿಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದುಘಿ, ಮೊದಲನೇ ಭಾಗದಲ್ಲಿ ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಪ್ರಸ್ತುತ ಚೆನ್ನೈನಲ್ಲಿ ವೈದ್ಯಕೀಯ ಸಂದರ್ಶಕರು ಮತ್ತು ಮನೋಶಾಸಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ. ಅನಂತರಾಮನ್ ಇವರು ಚರ್ಚೆ ನಡೆಸಿಕೊಡಲಿದ್ದಾರೆ. ಎರಡನೇ ಭಾಗದಲ್ಲಿ ಹಳೇ ವಿದ್ಯಾರ್ಥಿಗಳಾದ ಹಾಗೂ ರಾಜಸ್ಥಾನ ಸರಕಾರಿ ವೈದ್ಯಾಕಾರಿಗಳಾದ ಡಾ.ದಿವ್ಯ ಕುಮಾರ್ ವರ್ಮ ಮತ್ತು ಮೂರನೇ ಭಾಗವನ್ನು ಹಳೆ ವಿದ್ಯಾರ್ಥಿ ಮತ್ತು ಇನ್‌ಸೈಟ್ ಹೆಲ್ತ್‌ಕೇರ್ ಹೋಮಿಯೋಪಥಿಕ್ ಮಲ್ಟಿ ಸ್ಪೆಷಾಲಿಟಿ ಆ್ಯಂಡ್ ಕೌನ್ಸೆಲಿಂಗ್ ಸೆಂಟರ್, ತ್ರಿಶೂರ್ ಇಲ್ಲಿನ ನಿರ್ದೇಶಕ ಡಾ.ರೆಜು ಕರೀಮ್ ಇವರು ನಡೆಸಿಕೊಡಲಿದ್ದಾರೆ ಎಂದು ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಲಿಕಾ ವೈದ್ಯರಿಗೆ ಹಾಗೂ ನಲ್ಕನೇ ವರ್ಷದ ಬಿಎಚ್‌ಎಂಎಸ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ವಿಜೇತರಿಗೆ 30ಸಾವಿರ ನಗದು ಬಹುಮಾನ ನೀಡಲಾಗುವುದು ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಡಾ.ಶಿವಪ್ರಸಾದ್ ಕೆ., ಉಪ ಪ್ರಾಂಶುಪಾಲರಾದ ಡಾ.ಇಎಸ್‌ಜೆ ಪ್ರಭು ಕಿರಣ್, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಜಿ.ರಾಜಾಚಂದ್ರ, ಮಾಧ್ಯಮ ಸಮಿತಿ ಅಧ್ಯಕ್ಷ ಡಾ.ಸೌಮಿನಿ ಎಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News