ರೈಲ್ವೇಗೆ ಪ್ರಪ್ರಥಮ ವಾಯುಬಲ ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸದ ಇಂಜಿನ್

Update: 2018-10-25 15:38 GMT

ಹೊಸದಿಲ್ಲಿ,ಅ.25: ಭಾರತೀಯ ರೈಲ್ವೇಯು ಇದೇ ಮೊದಲ ಬಾರಿ ವಾಯುಬಲ (ಏರೋಡೈನಾಮಿಕ್) ಮತ್ತು ಪ್ರಯಾಣಿಕಸ್ನೇಹಿ (ಎರ್ಗೊನೋಮಿಕ್) ವಿನ್ಯಾಸದ ಇಂಜಿನ್ ಪಡೆದುಕೊಂಡಿದೆ. ವ್ಯಾಪ್-5 ಮಾದರಿಯ ಈ ಇಂಜಿನ್ ಗಂಟೆಗೆ 200ಕಿ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಇದು ಉತ್ತಮ ಇಂಧನ ಸಾಮರ್ಥ್ಯವನ್ನು ಹೊಂದಿದ್ದು ಅತಿವೇಗದ ಚಾಲನೆಗೆ ಸೂಕ್ತವಾಗಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.

ಚಿತ್ತರಂಜನ್ ಲೊಕೊಮೋಟಿವ್ ವರ್ಕ್ಸ್‌ನಿಂದ ತಯಾರಿಸಲ್ಪಟ್ಟಿರುವ ಈ ಇಂಜಿನನ್ನು ರಾಜಧಾನಿ ಎಕ್ಸ್‌ಪ್ರೆಸ್, ಗಾಟಿಮನ್ ಎಕ್ಸ್‌ಪ್ರೆಸ್ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್ ಮುಂತಾದ ರೈಲುಗಳಲ್ಲಿ ಅಳವಡಿಸಲಾಗುವುದು. ರೈಲ್ವೇಯು ದೇಶದ ಪ್ರಪ್ರಥಮ ಇಂಜಿನ್‌ರಹಿತ ರೈಲು, ಟ್ರೈನ್18ನ ಪ್ರಾಯೋಗಿಕ ಓಡಾಟವನ್ನು ಅಕ್ಟೋಬರ್ 29ರಂದು ನಡೆಸಲಿದೆ ಎಂದು ಸಚಿವಾಲಯ ತಿಳಿಸಿದೆ. ಟ್ರೈನ್18ಅನ್ನು ಮೂವತ್ತು ವರ್ಷ ಹಳೆಯ ಶತಾಬ್ದಿ ಎಕ್ಸ್‌ಪ್ರೆಸ್‌ನ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದೆ. ಸೆಲ್ಫ್ ಪ್ರೊಪಲ್ಶನ್ ವಿಧಾನದ ಮೂಲಕ ಕಾರ್ಯಾಚರಿಸುವ ಈ ರೈಲು ಗಂಟೆಗೆ 160ಕಿ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಟ್ರೈನ್18 ಪ್ರಯಾಣದ ಅವಧಿಯಲ್ಲಿ ಹದಿನೈದು ನಿಮಿಷಗಳ ಕಡಿತ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News