ಶಿರ್ವದ ವ್ಯಕ್ತಿ ದುಬೈಯಲ್ಲಿ ಆತ್ಮಹತ್ಯೆ

Update: 2018-10-25 16:25 GMT

ಶಿರ್ವ, ಅ.25: ಶಿರ್ವ ಸಮೀಪದ ಪಿಲಾರ್ ಮೂಲದ ವ್ಯಕ್ತಿಯೊಬ್ಬರು ದುಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಪಿಲಾರು ನಿವಾಸಿ ವಿನ್ಸೆಂಟ್ ಮೆಂಡೋನ್ಸಾ (54) ಎಂದು ಗುರುತಿಸಲಾಗಿದೆ. ಅ.24ರಂದು ಇವರ ವಾಸದ ಕೊಠಡಿಯಲ್ಲಿ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.

ವಿನ್ಸೆಂಟ್ ಮೆಂಡೋನ್ಸಾ ದುಬೈಯಲ್ಲಿ ಟೆಕ್ನಿಕಲ್ ಸರ್ವಿಸ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News