ಮ್ಯಾನ್ಮಾರ್‌ನಲ್ಲಿ ಮುಂದುವರಿದ ಜನಾಂಗೀಯ ಹತ್ಯೆ: ವಿಶ್ವಸಂಸ್ಥೆಯ ಸತ್ಯಶೋಧನಾ ತಂಡ

Update: 2018-10-25 17:49 GMT

 ವಿಶ್ವಸಂಸ್ಥೆ, ಅ. 25: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ಜನಾಂಗೀಯ ನಿರ್ಮೂಲನೆ ಇನ್ನೂ ಮುಂದುವರಿಯುತ್ತಿದೆ ಎಂದು ವಿಶ್ವಸಂಸ್ಥೆಯ ಸತ್ಯಶೋಧನಾ ತಂಡವೊಂದು ಬುಧವಾರ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವರದಿಯನ್ನು ಮಂಡಿಸಿದ ತಂಡವು, ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಶಿಫಾರಸು ಮಾಡಬೇಕು ಎಂದು ಕರೆ ನೀಡಿದೆ.

ಸಾಮೂಹಿಕ ಹತ್ಯಾಕಾಂಡಗಳಲ್ಲದೆ, ನಿರ್ದಿಷ್ಟ ಜನಾಂಗದ ಮೇಲೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ, ಮಕ್ಕಳ ಜನನವನ್ನು ತಡೆಯಲಾಗುತ್ತಿದೆ ಹಾಗೂ ಭಾರೀ ಸಂಖ್ಯೆಯ ನಿರ್ವಸಿತ ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯಶೋಧನಾ ತಂಡದ ಮುಖ್ಯಸ್ಥ ಮರ್ಝುಕಿ ಡರುಸ್ಮನ್ ಹೇಳಿದರು.

‘‘ಅಲ್ಲಿ ಜನಾಂಗೀಯ ಹತ್ಯೆ ನಿರಂತರವಾಗಿ ನಡೆಯುತ್ತಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News