ನೆಲ್ಯಾಡಿ: ಎಸ್ಸೆಸ್ಸೆಫ್ ಯುನಿಟ್ ಸಮ್ಮೇಳನ

Update: 2018-10-25 17:16 GMT

ನೆಲ್ಯಾಡಿ, ಅ. 25: ಯುವ ಜನತೆ ಅಕ್ರಮ, ಅನಾಚಾರ, ಗಾಂಜ, ಮದ್ಯ ವ್ಯಸನಿಯಂತ ದುಷ್ಚಟಗಳಿಂದ ತುಂಬಿದ ಪ್ರಸಕ್ತ ಸನ್ನಿವೇಶದಲ್ಲಿ "ಯೌವ್ವನ ಮರೆಯಾಗುವ ಮುನ್ನ" ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಪ್ರತೀ ಶಾಖಾ ಮಟ್ಟದಲ್ಲಿ ಹಮ್ಮಿಕೊಂಡಿರುವ ಯುನಿಟ್ ಸಮ್ಮೇಳನವು ನೆಲ್ಯಾಡಿ ಸುನ್ನೀ ಸೆಂಟರ್ ಸಂಭಾಂಗಣದಲ್ಲಿ ನಡೆಯಿತು.

ಕೇಂದ್ರ ಜುಮಾ ಮಸೀದಿ ಖತೀಬ್ ಅಲ್ಹಾಜ್ ಅಬೂಹನ್ನತ್ ಮುಹಮ್ಮದ್ ಸಖಾಫಿ ಕಾರ್ಯಕ್ರಮವನ್ನು ದುಆಃ ಮೂಲಕ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ನಾಯಕ ಎಫ್.ಎಚ್ ಮುಹಮ್ಮದ್ ಮಿಸ್ಬಾಹಿ  "ಯೌವನ ಮರೆಯಾಗುವ ಮುನ್ನ" ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸ್ಥಳೀಯ ಶಾಖಾ ಅಧ್ಯಕ್ಷ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಶರೀಫ್ ಸಖಾಫಿ, ಪ್ರಿನ್ಸಿಪಾಲ್ ಅಲ್ ಬದ್ರಿಯಾ ಶರೀಅತ್ ಕಾಲೇಜು ನೆಲ್ಯಾಡಿ, ರಫೀಕ್ ಸಖಾಫಿ ಆತೂರು, ಎನ್.ಎಸ್ ಸುಲೈಮಾನ್, ಉಮರ್ ತಾಜ್, ಮುಸ್ತಫಾ ಪಟ್ಟೆ, ಕೆಸಿಎಫ್ ಸದಸ್ಯರುಗಳಾದ ಲತೀಫ್ ಪಡ್ಡಡ್ಕ, ಲತೀಫ್ ಮುದ್ದಿಗೆ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಇರ್ಶಾದ್ ಕೆ.ಇ. ಸ್ವಾಗತಿಸಿ, ಮುಸ್ತಫಾ ಹಿದಾಯತ್ ನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News