ಅ. 26ರಂದು ಮಾಸ್ತಿಕಟ್ಟೆಯಲ್ಲಿ ಯುನಿಟ್ ಕಾನ್ಫರೆನ್ಸ್
Update: 2018-10-25 22:49 IST
ಮಂಗಳೂರು, ಅ. 25: ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಮತ್ತು ಆಝಾದ್ನಗರ ಶಾಖೆ ಇದರ ಜಂಟಿ ಆಶ್ರಯದಲ್ಲಿ ಅ.26ರಂದು ಮಗ್ರಿಬ್ ನಮಾಝ್ ಬಳಿಕ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಯುನಿಟ್ ಕಾನ್ಫರೆನ್ಸ್ ನಡೆಯಲಿದೆ.
ಕಾರ್ಯಕ್ರಮ ಸೈಯದ್ ಜಲಾಲ್ ತಂಙಲ್ ಅವರ ದುಆದೊಂದಿಗೆ ಪ್ರಾರಂಭಗೊಂಡು ಕಾರ್ಯಕ್ರಮವನ್ನು ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಪಿ. ಎಸ್. ಶಿಹಾಬುದ್ದಿನ್ ಸಖಾಫಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಯೌವ್ವನ ಮರೆಯಾಗುವ ಮುನ್ನ ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ ಟಿ ಎಂ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.