200ಕ್ಕೂ ಅಧಿಕ ಶಾಸಕರು ಇನ್ನೂ ಪಾನ್ ದಾಖಲೆ ನೀಡಿಲ್ಲ: ವರದಿ

Update: 2018-10-27 17:46 GMT

ಹೊಸದಿಲ್ಲಿ,ಅ.27: ಏಳು ಹಾಲಿ ಸಂಸದರು ಮತ್ತು 199 ಶಾಸಕರು, ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ಅಗತ್ಯವಾಗಿರುವ ಪಾನ್ ದಾಖಲೆಗಳನ್ನು ಇನ್ನೂ ಘೋಷಿಸಿಲ್ಲ ಎಂದು ವರದಿ ತಿಳಿಸಿದೆ. 542 ಲೋಕಸಭಾ ಸದಸ್ಯರು ಮತ್ತು 4,086 ಶಾಸಕರ ಪರ್ಮನೆಂಟ್ ಅಕೌಂಟ್ ನಂಬರ್ (ಪಾನ್)ಅನ್ನು ಪರಿಶೀಲಿಸಿದ ನಂತರ ಪ್ರಜಾಸತಾತ್ಮಕ ಸುಧಾರಣೆಗಳ ಸಂಘಟನೆ (ಎಡಿಆರ್) ಮತ್ತು ರಾಷ್ಟ್ರೀಯ ಚುನಾವಣಾ ನೋಟ (ಎನ್‌ಇಡಬ್ಲೂ) ಸಿದ್ಧಪಡಿಸಿದ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರದೊಂದಿಗೆ ಪಾನ್ ವಿವರಗಳನ್ನು ರಿಟರ್ನಿಂಗ್ ಅಧಿಕಾರಿಗಳಿಗೆ ಒಪ್ಪಿಸಬೇಕಾಗಿದೆ.

ಕಾಂಗ್ರೆಸ್‌ನ 51 ಶಾಸಕರು ತಮ್ಮ ಪಾನ್ ವಿವರಗಳನ್ನು ಒದಗಿಸಿಲ್ಲ. ಬಿಜೆಪಿಯ 42, ಸಿಪಿಐ(ಎಂ)ನ 25 ಶಾಸಕರು ತಮ್ಮ ಪಾನ್ ವರದಿಗಳನ್ನು ಒಪ್ಪಿಸಿಲ್ಲ ಎಂದು ವರದಿ ತಿಳಿಸಿದೆ. ಇನ್ನು ರಾಜ್ಯವಾರು ಅಂಕಿಅಂಶದ ಪ್ರಕಾರ, ಕೇರಳದ 33 ಶಾಸಕರು, ಮಿಝೊರಾಂನ 28 ಶಾಸಕರು ಮತ್ತು ಮಧ್ಯಪ್ರದೇಶದ 19 ಶಾಸಕರು ತಮ್ಮ ಪಾನ್ ವಿವರಗಳನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ. ಸಂಸದರ ಪೈಕಿ ಒಡಿಶಾದ ಬಿಜು ಜನತಾದಳ ಮತ್ತು ತಮಿಳುನಾಡಿನ ಎಐಎಡಿಎಂಕೆಯ ತಲಾ ಇಬ್ಬರು ಸಂಸದರು, ಅಸ್ಸಾಂ, ಮಿಝೊರಾಂ ಮತ್ತು ಲಕ್ಷದ್ವೀಪದ ತಲಾ ಒಬ್ಬರು ಸಂಸದರು ತಮ್ಮ ಪಾನ್ ವಿವರನ್ನು ಒದಗಿಸಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News