×
Ad

ಬಿಜೆಪಿ ಸಜಿಪಮುನ್ನೂರು-ಸಜಿಪಮೂಡ ಗ್ರಾಮ ಸಮಿತಿ: ಶಾಸಕರಿಗೆ ಸನ್ಮಾನ

Update: 2018-10-28 22:20 IST

ಬಂಟ್ವಾಳ, ಅ. 28: ಬಿಜೆಪಿ ಸಜೀಪಮುನ್ನೂರು ಮತ್ತು ಸಜೀಪಮೂಡ ಗ್ರಾಮ ಸಮಿತಿ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ರವಿವಾರ ನಡೆಯಿತು.

ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಪರಿಚಯವಿಲ್ಲದ ತನ್ನನ್ನು ಬಂಟ್ವಾಳ ಕ್ಷೇತ್ರದಲ್ಲಿ ಗೆಲ್ಲುವಂತೆ ಶ್ರಮಿಸಿದ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯ ಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ರಕ್ತವನ್ನು ಬೆವರಿನ ರೂಪದಲ್ಲಿ ಹರಿಸಿ ಬಂಟ್ವಾಳದ ಪರಿವರ್ತನೆಗೆ ಕಾರಣೀಕರ್ತರಾದ ಈ ಭಾಗದ ಜನರ ಋಣ ತೀರಿಸಲು ಶಾಸಕ ರಾಜೇಶ್ ನಾಯಕ್ ಪ್ರಮಾಣಿಕ ಪ್ರಯತ್ನ ಮಾಡುತ್ತಾರೆ. ಹಿಂದೂ ಸಮಾಜದ ಮೇಲೆ ರಾಜಕಾರಣದ ಮೂಲಕ ದಾಳಿಗಳು ನಡೆಯುತ್ತಿದ್ದು, ಇದಕ್ಕೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡುವರು ಎಂದರು.

ದೇಶದಲ್ಲಿಯೇ ಮತ್ತೆ ಪರಿವರ್ತನೆಯ ಗಾಳಿ ಬೀಸುತ್ತಿದೆ. ಕೇರಳದಲ್ಲಿಯೂ ಪರಿವರ್ತನೆಯಾಗುತ್ತಿದೆ ಎಂದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಬಂಟ್ವಾಳ ಕ್ಷೆತ್ರಾಧ್ಯಕ್ಷ ದೇವದಾಸ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರ್, ಉದ್ಯಮಿಗಳಾದ  ವಿವೇಕ್ ಶೆಟ್ಟಿ ನಗ್ರಿಗುತ್ತು, ಸಂತೋಷ್ ಕುಮಾರ್ ಶೆಟ್ಟಿ ದಲಂದಿಲ, ಕ್ಷೇತ್ರ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಮಾಜಿ ತಾಪಂ ಅಧ್ಯಕ್ಷ ಯಶವಂತ್ ದೇರಾಜೆ, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಮುಖಂಡರಾದ ಜಿ.ಆನಂದ, ತನಿಯಪ್ಪ ಗೌಡ, ಬಾಲಕೃಷ್ಣ ಸೆಕರ್ಳ, ಜಯಶಂಕರ ಬಾಸಿಂತಾಯ, ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರುಗಳಾದ ದಯಾನಂದ, ಸುರೇಶ್ ಪೂಂಜಾ, ಅರವಿಙದ ಭಟ್, ರಂಜಿತ್  ಉಪಸ್ಥಿತರಿದ್ದರು.

ಇದೇ ವೇಳೆ ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ, ಸಂತೋಷ್ ಶೆಟ್ಟಿ ದಲಂದಿಲ, ಶ್ರೀಕಾಂತ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ವಸಂತ ಶೆಟ್ಟಿ, ಜಯಶಂಕರ, ಈಶ್ವರ ಪೂಜಾರಿ, ಜಯಪ್ರಾಕಾಶ್, ಗಂಗಯ್ಯ ಪೂಜಾರಿ, ಇಸ್ಮಾಯಿಲ್ ನಂದಾವರ, ಶ್ರೀನಿವಾಸ್, ವಿಶ್ವನಾಥ ಕೊಟ್ಟಾರಿ  ಹಾಜರಿದ್ದರು.
ರಂಜನ್ ತಂಡ ಪ್ರಾರ್ಥಿಸಿ, ಬಜೆಪಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಗಟ್ಟಿ ಸ್ವಾಗತಿಸಿ, ವಿರೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News