ಮನ್‌ಕಿ ಬಾತ್: ಸರ್ದಾರ್ ವಲ್ಲಭಾ ಭಾಯ್ ಪಟೇಲ್ ನೆನಪಿಸಿದ ಪ್ರಧಾನಿ

Update: 2018-10-28 18:24 GMT

ಹೊಸದಿಲ್ಲಿ, ಅ. 29: ಭಾರತದ ಮೊದಲ ಗೃಹ ಮಂತ್ರಿ ಹಾಗೂ ‘ಉಕ್ಕಿನ ಮನುಷ್ಯ’ರೆಂದು ಖ್ಯಾತರಾಗಿದ್ದ ಸರ್ದಾರ್ ವಲ್ಲಭಾ ಭಾಯ್ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 49 ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಪ್ರಶಂಸಿಸಿದ್ದಾರೆ.

‘ಏಕತೆಯ ಪ್ರತಿಮೆ’ಯನ್ನು ಉಲ್ಲೇಖಿಸಿದ ಪ್ರಧಾನಿ ಅವರು, ಜಗತ್ತಿನಲ್ಲೇ ಅತಿ ದೊಡ್ಡ ವಿಗ್ರಹ ಭಾರತದಲ್ಲಿ ಸ್ಥಾಪನೆಯಾಗುತ್ತಿರುವುದು ಭಾರತೀಯರ ಹೆಮ್ಮೆ ಎಂದು ಹೇಳಿದರು. ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅಕ್ಟೋಬರ್ 31ರಂದು ಆಯೋಜಿಸ ಲಾಗುವ ‘ಏಕತೆಗಾಗಿ ಓಟ’ದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಶನಿವಾರ ಆಚರಿಸಲಾದ ಇನ್‌ಫೆಂಟ್ರಿ ದಿನಾಚರಣೆ ಬಗ್ಗೆ ಮಾತನಾಡಿದ ಅವರು, ಜಮ್ಮು ಹಾಗೂ ಕಾಶ್ಮೀರದಲ್ಲಿ ಒಳನುಸುಳುಕೋರರ ವಿರುದ್ಧ ಹೋರಾಟ ನಡೆಸುವಂತೆ ಆಗಿನ ಭಾರತದ ಗೃಹ ಸಚಿವ ಸರ್ದಾರ್ ಪಟೇಲ್ ಭಾರತೀಯ ಸೇನೆಯ ಯುವ ಯೋಧರಿಗೆ ನಿರ್ದೇಶಿಸಿದ ದಿನ ಎಂದರು.

ಅಕ್ಟೋಬರ್ 31ರಂದು ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ. ಇಂದಿರಾ ಜಿ ಗೆ ಕೂಡ ನಾನು ಗೌರವ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. ಇಂದು ಭಾರತವನ್ನು ಏಕೀಕೃತವಾಗಿ ನೋಡಲು ಸಾಧ್ಯವಾಗುವುದಾದರೆ, ಇದರ ಸರ್ದಾರ್ ಪಟೇಲ್ ಅವರ ಬುದ್ದಿವಂತಿಕೆ, ವಿವೇಕ ಕಾರಣ. ಅಕ್ಟೋಬರ್ 31ರಂದು ಏಕತೆಯ ಪ್ರತಿಮೆಯನ್ನು ದೇಶಕ್ಕೆ ಅರ್ಪಿಸುವ ಮೂಲಕ ಸರ್ದಾರ್ ಪಟೇಲ್ ಅವರಿಗೆ ನೀಡಲಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News