×
Ad

​ಮರಳು ದಿಬ್ಬ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

Update: 2018-10-30 19:05 IST

ಉಡುಪಿ, ಅ.30: ಜಿಲ್ಲೆಯ ಸಿಆರ್‌ಝೆಡ್ ವ್ಯಾಪ್ತಿಯ ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಗುರುತಿಸಿರುವ ಮರಳ ದಿಬ್ಬಗಳಿಗೆ ಅರ್ಹ ಪರವಾ ನಿಗೆದಾರರು ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.31ರ ಸಂಜೆ 5ಗಂಟೆಯವರೆಗೆ ವಿಸ್ತರಿಸಲಾಗಿದೆ.

ಇಲ್ಲಿನ ಮರಳು ದಿಬ್ಬಗಳಿಗೆ ರಾಜ್ಯ ಕರಾವಳಿ ವಲಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಮರಳು ದಿಬ್ಬಗಳ ಮತ್ತು ಅರ್ಹ ಪರವಾನಿಗೆದಾರರ ಪಟ್ಟಿಯನ್ನು ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯವರ ಕಚೇರಿಯಲ್ಲಿ ಪ್ರಕಟಿಸ ಲಾಗಿದೆ. ಆಸಕ್ತರು ಅ.27ರೊಳಗೆ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸು ವಂತೆ ಪ್ರಕಟಣೆ ನೀಡಲಾಗಿತ್ತು.

ಅ.29ರಂದು ನಡೆದ ಜಿಲ್ಲಾ ಏಳು ಸದಸ್ಯರ ಸಮಿತಿ ಸಭೆಯ ನಿರ್ಣಯದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿ ಅ.31ರ ಸಂಜೆ 5ಗಂಟೆಯೊಳಗೆ ಹಾಗೂ 2011ರ ಪೂರ್ವದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳು ಪರವಾನಿಗೆ ಪಡೆದು ಕೊಂಡಿರುವ ಬಗ್ಗೆ ದಾಖಲಾತಿಗಳು ಇದ್ದವರು ಕೂಡ ಅರ್ಜಿ ಸಲ್ಲಿಸಬ ಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News