×
Ad

ನ.1ರಿಂದ ಪರ್ಕಳ ನೇತಾಜಿ ಕ್ರಿಕೆಟ್ ಪಂದ್ಯಕೂಟ

Update: 2018-10-30 19:14 IST

ಉಡುಪಿ, ಅ.30: ಪರ್ಕಳ ನೇತಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಹ್ವಾನಿತ ಎಂಟು ತಂಡಗಳ 41ನೆ ನೇತಾಜಿ ಕ್ರಿಕೆಟ್ ಪಂದ್ಯಾಕೂಟವನ್ನು ನ.1ರಿಂದ 4ರವರೆಗೆ ಪರ್ಕಳ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಪಂದ್ಯಕೂಟದಲ್ಲಿ ಚಕ್ರವರ್ತಿ ಕುಂದಾಪುರ, ಟಾರ್ಪೆಡೋಸ್ ಕುಂದಾಪುರ, ಸೈಮಂಡ್ಸ್ ಕಡಿಯಾಳಿ, ಬ್ಲೂಸ್ಟಾರ್ ಶಿರ್ವ, ಕೋಸ್ಟಲ್ ಮಲ್ಪೆ, ಪಡುಬಿದ್ರಿ ಫ್ರೆಂಡ್ಸ್, ವೆಂಕಟರಮಣ ಪಿತ್ರೋಡಿ ಮತ್ತು ಅತಿಥೇಯ ನೇತಾಜಿ ತಂಡಗಳು ಭಾಗವಹಿಸಲಿವೆ ಎಂದು ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.

ಕ್ರಿಕೆಟ್‌ನ ಎಲ್ಲ ನಿಯಮಗಳನ್ನು ಅನುಸರಿಸಿ 15 ಓವರ್‌ಗಳ ಇನಿಂಗ್ಸ್‌ಗಳನ್ನು ಒಳಗೊಂಡ ಅಪರೂಪದ ಪಂದ್ಯಕೂಟ ಇದಾಗಿದೆ. ಈ ಪಂದ್ಯಕೂಟದಲ್ಲಿ ನಗದು ಬಹುಮಾನಕ್ಕಿಂತ ಟ್ರೋಫಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಂಡ ಗಳಲ್ಲಿ ರಾಜ್ಯ, ಹೊರರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿರುವ ಹೆಸರಾಂತ ಆಟಗಾರರು ಆಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಂದ್ಯಕೂಟದ ಆಳೆತ್ತರದ ಟ್ರೋಫಿಗಳನ್ನು ಉಡುಪಿ ನಗರಸಭೆ ಮಾಜಿ ಸದಸ್ಯ ಮಹೇಶ್ ಠಾಕೂರ್ ಅನಾವರಣಗೊಳಿಸಿದರು. ನಗರ ಸಭೆ ಸದಸ್ಯ ಮಂಜುನಾಥ್ ಮಣಿಪಾಲ್, ಉದ್ಯಮಿ ಪ್ರಸಾದ್ ಶೆಟ್ಟಿ ಕೋಂಬೆ, ಗೌಮ್, ರಿಝ್ವನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News