×
Ad

44 ವರ್ಷಗಳಲ್ಲಿ 60 ಶೇ. ವನ್ಯಜೀವಿಗಳ ನಾಶ: ಡಬ್ಲ್ಯುಡಬ್ಲ್ಯುಎಫ್ ಇಂಟರ್‌ನ್ಯಾಶನಲ್ ವರದಿ

Update: 2018-10-30 20:44 IST

ಬರ್ಲಿನ್, ಅ. 30: ಮಾನವನ ತಿನ್ನುವ ಅನಿಯಂತ್ರಿತ ದಾಹದಿಂದಾಗಿ ಜಾಗತಿಕ ವನ್ಯಜೀವಿಗಳು ನಾಶವಾಗಿವೆ, ಸಾಮೂಹಿಕ ವಿನಾಶ ತಲೆದೋರಿದೆ ಹಾಗೂ ಮಾನವನ ಬೆಳೆಯುತ್ತಿರುವ ಹಸಿವಿಗೆ ಸ್ಪಂದಿಸುವ ಭೂಮಿಯ ಸಾಮರ್ಥ್ಯ ಮುಗಿದು ಹೋಗಿದೆ ಎಂದು ವನ್ಯಜೀವಿ ಸಂರಕ್ಷಣಾ ಗುಂಪು ಡಬ್ಲ್ಯುಡಬ್ಲ್ಯುಎಫ್ ಮಂಗಳವಾರ ಎಚ್ಚರಿಸಿದೆ.

1970ರಿಂದ 2014ರ ಅವಧಿಯಲ್ಲಿ ಮಾನವನ ಚಟುವಟಿಕೆಗಳಿಂದಾಗಿ ಮೀನು, ಹಕ್ಕಿಗಳು, ಉಭಯವಾಸಿಗಳು, ಸರೀಸೃಪಗಳು ಮತ್ತು ಸಸ್ತನಿಗಳು ಮುಂತಾದ ಬೆನ್ನುಮೂಳೆಯಿರುವ ಪ್ರಾಣಿಗಳ ಪೈಕಿ 60 ಶೇಕಡ ನಾಶವಾಗಿವೆ ಎಂದು ಡಬ್ಲುಡಬ್ಲುಎಫ್‌ನ ‘ಲಿವಿಂಗ್ ಪ್ಲಾನೆಟ್’ ವರದಿ ಹೇಳಿದೆ.

‘‘ಪರಿಸ್ಥಿತಿ ತುಂಬಾ ಕೆಟ್ಟಿದೆ ಹಾಗೂ ಅದು ದಿನದಿಂದ ದಿನಕ್ಕೆ ಹದಗೆಡುತ್ತಿದೆ’’ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಟರ್‌ನ್ಯಾಶನಲ್‌ನ ಮಹಾನಿರ್ದೇಶಕ ಮಾರ್ಕೊ ಲ್ಯಾಂಬರ್ಟಿನಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಒಂದೇ ಒಂದು ಶುಭ ಸುದ್ದಿ ಏನೆಂದರೆ, ಏನಾಗುತ್ತಿದೆ ಎನ್ನುವುದು ನಮಗೆ ಗೊತ್ತಿದೆ’’ ಎಂದರು.

ಸಿಹಿನೀರಿನ ಜಲಚರಗಳ ಸಂಖ್ಯೆಯು 44 ವರ್ಷಗಳ ಅವಧಿಯಲ್ಲಿ 80 ಶೇಕಡದಷ್ಟು ನಾಶಗೊಂಡಿವೆ.

ಪ್ರಾದೇಶಿಕವಾರು, ಲ್ಯಾಟಿನ್ ಅಮೆರಿಕದ ಪರಿಸ್ಥಿತಿ ಹೆಚ್ಚು ಶೋಚನೀಯವಾಗಿದೆ. ಅಲ್ಲಿ ಈ ಅವಧಿಯಲ್ಲಿ ಸುಮಾರು 90 ಶೇಕಡ ವನ್ಯಜೀವಿಗಳ ನಾಶವಾಗಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News