ಡಾಲರ್ ಎದುರು ರೂಪಾಯಿ ಮೌಲ್ಯ 73.68 ರೂ.ಗೆ ಕುಸಿತ

Update: 2018-10-30 16:18 GMT

ಮುಂಬೈ, ಅ.30: ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ 23 ಪೈಸೆಯಷ್ಟು ಕುಸಿತ ಕಂಡಿದ್ದು 73.68 ರೂ.ಗೆ ಇಳಿದಿದೆ. ಸೋಮವಾರ ರೂಪಾಯಿ ಮೌಲ್ಯದಲ್ಲಿ ತುಸು ಮಟ್ಟಿನ ಚೇತರಿಕೆ ಕಂಡಿದ್ದು 73.45 ರೂ.ಗೆ ತಲುಪಿತ್ತು.

ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಒಂದು ಹಂತದಲ್ಲಿ ರೂಪಾಯಿ ಮೌಲ್ಯ ಸತತ ಕುಸಿಯುತ್ತಾ ಸಾಗಿ 73.70 ರೂ.ಗೆ ತಲುಪಿತ್ತು. ಬಳಿಕ ತುಸು ಚೇತರಿಕೆ ಕಂಡು 73.68 ರೂ.ಗೆ ಮುಟ್ಟಿದೆ. ಅಮೆರಿಕದ ಡಾಲರ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ರೂಪಾಯಿ ಮೌಲ್ಯದಲ್ಲಿ ಕುಸಿತಕ್ಕೆ ಕಾರಣವಾಯಿತು. ಆದರೆ ಕಚ್ಛಾತೈಲದ ಬೆಲೆ ಸ್ವಲ್ಪ ಇಳಿದ ಕಾರಣ ರೂಪಾಯಿ ಮೌಲ್ಯ ಇನ್ನಷ್ಟು ಕುಸಿತದಿಂದ ಪಾರಾಯಿತು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮುಂಬಾಯಿ ಶೇರುಪೇಟೆಯ ಬಿಎಸ್‌ಇ ಸೂಚ್ಯಂಕ ಮಂಗಳವಾರ 176 ಅಂಕಗಳ ಕುಸಿತ ಕಂಡಿತು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು, ವಿದೇಶಿ ಬಂಡವಾಳದ ಹೊರಹರಿವು ಮುಂತಾದ ಕಾರಣದಿಂದ ಬಿಎಸ್‌ಇ ಸೂಚ್ಯಂಕದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News