ಉಡುಪಿ: ಪ್ರಭಾರ ಹಿರಿಯ ಭೂವಿಜ್ಞಾನಿಯಾಗಿ ಪದ್ಮಜ
Update: 2018-10-30 22:18 IST
ಉಡುಪಿ, ಅ.30: ಜಿಲ್ಲೆಯಲ್ಲಿ ಮರಳು ಸಮಸ್ಯೆ ವಿರುದ್ಧ ನಡೆಯುತ್ತಿರುವ ಹೋರಾಟದ ಮಧ್ಯೆ ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಹಿರಿಯ ಭೂವಿಜ್ಞಾನಿಯಾಗಿ ಹಾಸನ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಪದ್ಮಜ ಅವರನ್ನು ನಿಯೋಜಿಸಲಾಗಿದೆ.
ಇದೀಗ ಉಡುಪಿಯಲ್ಲಿ ಪ್ರಭಾರ ಹಿರಿಯ ಭೂವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರಂಜನ್ ಅವರ ಪ್ರಭಾರ ಹುದ್ದೆಯನ್ನು ರದ್ದುಗೊಳಿಸ ಲಾಗಿದ್ದು, ಇನ್ನು ಮುಂದೆ ಅವರು ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯಾಗಿ ಮುಂದುವರಿಯಲಿದ್ದಾರೆ.
ಆದರೆ ಇದೊಂದು ಆಡಳಿತ್ಮಾಕ ಬದಲಾವಣೆಯಾಗಿದ್ದು, ಇದಕ್ಕೂ ಮರಳು ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ಜಿಲ್ಲಾಡಳಿತ ಕಚೇರಿಯ ಮೂಲಗಳು ತಿಳಿಸಿವೆ.