×
Ad

ಮರಳಿಗಾಗಿ ಧರಣಿ ಏಳನೆ ದಿನಕ್ಕೆ: 170 ಮಂದಿಗೂ ಪರವಾನಿಗೆ ನೀಡಲು ಆಗ್ರಹ

Update: 2018-10-30 22:26 IST

ಉಡುಪಿ, ಅ.30: ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರವೂ ಮುಂದುವರಿದ ಆರನೆ ದಿನದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಈಗಾಗಲೇ ಮರಳು ತೆಗೆ ಯಲು ಪರವಾನಗಿ ಹೊಂದಿರುವ 170 ಮಂದಿ ಜೊತೆ ಮಾಲೋಚನೆ ಸಭೆ ನಡೆಸಲಾಯಿತು.

ಎಲ್ಲ 170 ಪರವಾನಿಗೆದಾರರಿಗೆ ಮರಳು ತೆಗೆಯಲು ಅವಕಾಶ ನೀಡುವ ವರೆಗೆ ಧರಣಿಯನ್ನು ಹಿಂತೆಗೆಯಲ್ಲ ಎಂಬ ನಿರ್ಧಾರವನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು. ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮರಳು ತೆಗೆಯದಿರುವುದರಿಂದ ಅಭಿವೃದ್ಧಿ ಮಾತ್ರ ಕುಂಠಿತವಾಗುವುದಲ್ಲದೆ ಮುಂದಿನ ಮಳೆಗಾಲ ದಲ್ಲಿ ಕೃತಕ ನೆರೆ ಕೂಡ ಉಂಟಾಗಲಿದೆ. ಆದುದರಿಂದ ಜಿಲ್ಲೆಯನ್ನು ಅಧಿಕಾರಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಈ ಹೋರಾಟವನ್ನು ಇನ್ನಷ್ಟು  ತೀವ್ರಗೊಳಿ ಬೇಕಾಗಿದೆ ಎಂದರು.

ಆರನೆ ದಿನದ ಧರಣಿಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಜಿಪಂ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಇಂಜಿನಿಯರ್ ಅಸೋಸಿಯೇಶನ್‌ನ ಗೋಪಾಲ ಭಟ್, ಗುರುರಾಜ್ ಭಟ್, ದೋಣಿ ಮಾಲಕರ ಸಂಘದ ಅಧ್ಯಕ್ಷ ಸುಧಾಕರ್ ಪೂಜಾರಿ ಮೊದಲಾದವರು ಉಪಸ್ಥಿರಿದ್ದರು.

ದೋಣಿ ಕಾರ್ಮಿಕರ ಸಭೆ:  ಧರಣಿಯಲ್ಲಿ ಹೊಗೆ ದೋಣಿ ಕಾರ್ಮಿಕ ಸಂಘದ ಸದಸ್ಯರ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಯಿತು. ಇದರಲ್ಲಿ ಒಟ್ಟು 165 ಮರಳು ದಿಬ್ಬ ತೆರವುಗೊಳಿಸುವ ರವಾನಿಗೆದಾರರು ಭಾಗವಹಿಸಿದ್ದರು.

ಚೈನ್ನೈ ಹಸಿರು ಪೀಠದ ಆದೇಶ ಬಂದ ನಂತರ ಸರಕಾರ ಅಧಿಕಾರಿಗಳ ಮೂಲಕ ಪ್ರತಿಯೊಬ್ಬ ಪರವಾನಿಗೆದಾರನು ಸಾಂಪ್ರದಾಯಿಕ ಮರಳುಗಾರ ಎಂದು ದೃಢೀಕರಿಸಿ 2017-18ನೆ ಸಾಲಿನಲ್ಲಿ ಪರವಾನಿಗೆ ನೀಡಿದೆ. ಆದುದ ರಿಂದ ಸಾಂಪ್ರದಾಯಿಕ ಮರಳುಗಾರರಾದ 170 ಮಂದಿಗೂ ಏಕಕಾಲದಲ್ಲಿ ಮರಳು ತೆರವುಗೊಳಿಸುವ ಪರವಾನಿಗೆಯನ್ನು ನೀಡಬೇಕು ಎಂದು ಸರ್ವಾನು ಮತದ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಈ ನಿರ್ಣಯವನ್ನು ಅ.31ರಂದು ಜಿಲ್ಲಾಧಿಕಾರಿಗಳಿಗೆ ತಿಳಿಸುವ ಬಗ್ಗೆ ನಿರ್ಧ ರಿಸಲಾಯಿತು. ಅಲ್ಲದೆ ಮರಳುಗಾರಿಕೆಗೂ ತಕ್ಷಣ ಅನುಮತಿ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಈ ಸಭೆಯಲ್ಲಿ ಶಾಸಕ ರಘುಪತಿ ಭಟ್, ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಸುಧಾಕರ್ ಅಮೀನ್ ಹಾಗೂ ಇತ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಧರಣಿಯಲ್ಲಿ ಕಾಂಗ್ರೆಸ್ ಮುಖಂಡ ಭಾಗಿ

ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಈವರೆಗೆ ಯಾವುದೇ ಕಾಂಗ್ರೆಸ್ ಮುಖಂಡರು ಭಾಗವಹಿಸಿರಲಿಲ್ಲ. ಇಂದಿನ ಆರನೆ ದಿನದ ಧರಣಿಯಲ್ಲಿ ಅಚ್ಚರಿ ಎಂಬಂತೆ ಪಾಲ್ಗೊಂಡ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಅಲ್ಲದೆ ಹಾರ್ಡ್‌ವೇರ್ ಸಂಘ, ಮಾರ್ಬಲ್ಸ್ ಸಂಘ, ಇಂಟರ್‌ಲಾಕ್ ಹಾಗೂ ವೆಲ್ಡಿಂಗ್ ಫ್ಯಾಬ್ರಿಕೇಟ್ ಸಂಘ, ಮೇಸ್ತ್ರಿ ಅಸೋಶಿಯೇಶನ್, ಪೈಂಟರ್ ಅಸೋಶಿಯೇಶನ್, ವಿದ್ಯುತ್ ಗುತ್ತಿಗೆದಾರರು ಹೋರಾಟದಲ್ಲಿ ಪಾಲ್ಗೊಂಡು ಸರಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಗಳು ಕೂಡಲೇ ತಮ್ಮ ಪಟ್ಟನ್ನು ಸಡಿಲಿಸಿ ಜನತೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News