ಮಂಗಳೂರು: ಜೂಜಾಟ ಆಡುತ್ತಿದ್ದ 13 ಮಂದಿ ಬಂಧನ
Update: 2018-10-30 22:30 IST
ಮಂಗಳೂರು, ಅ.30: ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಆರೋಪದಲ್ಲಿ 13 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಕೂಳೂರಿನಲ್ಲಿ ಬಂಧಿಸಿದ್ದಾರೆ.
ನಿತ್ಯಾನಂದ ಶೆಟ್ಟಿ, ಸುಜಯ್ ಶೆಟ್ಟಿ, ಲ್ಯಾನ್ಸಿ ಡಿಸೋಜ, ಕಾರ್ತಿಕ್ ದಿನೇಶ್ ಅಂಚನ್, ರಘು, ಅವಿನಾಶ್, ಮಹೇಶ್ ಕುಮಾರ್ ಶೆಟ್ಟಿ, ದೀಕ್ಷಿತ್ ಕುಮಾರ್, ಗಣೇಶ್ ಕುಮಾರ್, ದೀಪಕ್ ಶೆಟ್ಟಿ, ಮುಹಮ್ಮದ್ ಮುಸ್ತಫ, ಕೌಶಿಕ್ ಗೌಡ ಮತ್ತು ಮುಹಮ್ಮದ್ ಹನೀಫ್ ಬಂಧಿತ ಆರೋಪಿಗಳು.
ಬಂಧಿತರಿಂದ 16,800 ರೂ. ನಗದು, ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ವಿಶ್ವಾಸ್ ಎಂಬಾತನು ದಾಳಿ ಸಮಯ ಓಡಿ ಹೋಗಿದ್ದನು. ಜೂಜಾಟ ಆಡುತ್ತಿದ್ದವರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈಗಳಾದ ಶ್ಯಾಮಸುಂದರ್, ಕಬ್ಬಾಳ್‌ರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.