24 ಗಂಟೆಗಳಲ್ಲಿ ತಮಿಳುನಾಡು,ಪುದುಚೇರಿಗೆ ಹಿಂಗಾರು ಮಳೆ ಪ್ರವೇಶ ಸಾಧ್ಯತೆ

Update: 2018-10-31 13:35 GMT

ಚೆನ್ನೈ,ಅ.31: ಮುಂದಿನ 24 ಗಂಟೆಗಳಲ್ಲಿ ಈಶಾನ್ಯ ಹಿಂಗಾರು ಮಳೆಯು ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರದೇಶಗಳನ್ನು ಅಪ್ಪಳಿಸಲಿದೆ ಮತ್ತು ಕ್ರಮೇಣ ಇತರ ಭಾಗಗಳಿಗೆ ವಿಸ್ತರಿಸಲಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿಯು ಬುಧವಾರ ತಿಳಿಸಿದೆ.

ಮೂರು ತಿಂಗಳ ಅವಧಿಯ(ಅಕ್ಟೋಬರ್-ಡಿಸೆಂಬರ್) ಹಿಂಗಾರು ಮಳೆಯು ಒಂದು ತಿಂಗಳು ವಿಳಂಬವಾಗಿ ಆಗಮಿಸುತ್ತಿದ್ದು,ಮುಂದಿನೆರಡು ತಿಂಗಳುಗಳು ನಿರ್ಣಾಯಕವಾಗಿರಲಿವೆ ಎಂದು ಅದು ಹೇಳಿದೆ.

ಈಶಾನ್ಯ ಮಾನ್ಸೂನ್‌ನಿಂದ ತಮಿಳುನಾಡಿನಲ್ಲಿ ಶೇ.12ರಷ್ಟು ಹೆಚ್ಚುವರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಕಳೆದ ತಿಂಗಳು ಭವಿಷ್ಯ ನುಡಿದಿತ್ತು.

 ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಮತ್ತು ಪುದುಚೇರಿಗಳ ಕರಾವಳಿ ಪ್ರದೇಶಗಳು ಮೊದಲ ಹಿಂಗಾರು ಮಳೆಗೆ ಸಾಕ್ಷಿಯಾಗಲಿವೆ. ಇದು ಕ್ರಮೇಣ ತಮಿಳುನಾಡಿನ ಇತರ ಭಾಗಗಳು ಮತ್ತು ನೆರೆಯ ದಕ್ಷಿಣ ಕರ್ನಾಟಕ ಹಾಗೂ ಕೇರಳಕ್ಕೆ ವ್ಯಾಪಿಸಲಿದೆ ಎಂದು ಪ್ರಾದೇಶಿಕ ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರದ ನಿರ್ದೇಶಕ ಎಸ್.ಬಾಲಚಂದ್ರನ್ ಅವರು ಇಲ್ಲಿ ತಿಳಿಸಿದರು. ತಿತ್ಲಿ ಮತ್ತು ಲುಬನ್ ಚಂಡಮಾರುತಗಳಿಂದಾಗಿ ಹಿಂಗಾರು ಮಳೆ ವಿಳಂಬವಾಗಿದೆ ಎಂದರು.

ಚೆನ್ನೈ ಮತ್ತು ಸುತ್ತುಮುತ್ತಲಿನ ಎಣ್ಣೋರ್,ಕೆಳಂಬಾಕ್ಕಂ ಮತ್ತು ಮಹಾಬಲಿಪುರಂ ಇತ್ಯಾದಿ ಕಡೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಐದು ಸೆಂ.ಮೀ.ಮಳೆಯಾಗಿದೆ.

ತಮಿಳುನಾಡು ಹಿಂಗಾರು ಮಳೆಯನ್ನೇ ಹೆಚ್ಚಾಗಿ ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News