ರಾಕೇಶ್ ಅಸ್ತಾನ ನ್ಯಾಯಾಲಯದ ಹಾದಿ ತಪ್ಪಿಸುತ್ತಿದ್ದಾರೆ: ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ ಸಿಬಿಐ ಅಧಿಕಾರಿ

Update: 2018-10-31 14:08 GMT
ರಾಕೇಶ್ ಅಸ್ತಾನ

ಹೊಸದಿಲ್ಲಿ, ಅ. 31: ಲಂಚ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿ ರದ್ದುಗೊಳಿಸುವಂತೆ ಕೋರಿ ಮನವಿ ಸಲ್ಲಿಸಿರುವ ಸಿಬಿಐಯ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ‘ಆಯ್ಕೆಯ ಸತ್ಯ’ಗಳನ್ನು ಮಾತ್ರ ಮುಂದಿರಿಸುವ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇದೆ ಎಂದು ಸಿಬಿಐ ಹೆಚ್ಚುವರಿ ಎಸ್.ಪಿ. ಎಸ್.ಎಸ್. ಗುರ್ಮ್ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಬುಧವಾರ ತಿಳಿಸಿದ್ದಾರೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಅಸ್ತಾನಾ ನಡುವಿನ ಸಂಘರ್ಷದಲ್ಲಿ ಇತರ ಸಿಬಿಐ ಅಧಿಕಾರಿಗಳೊಂದಿಗೆ ವರ್ಗಾವಣೆಗೊಳಗಾದ ಗುರ್ಮ್ ಅವರು, ಅಸ್ತಾನ ದಾಖಲಿಸಿದ ದೂರಿನಲ್ಲಿ ತನ್ನನ್ನು ಕಕ್ಷಿಗಾರರನನ್ನಾಗಿ ಮಾಡುವಂತೆ ಮನವಿ ಮಾಡಿದರು. ಪ್ರಕರಣದ ವಿಚಾರಣೆ ಆಲಿಸಲು ಅವಕಾಶ ನೀಡಬೇಕು ಎಂದು ಕೋರಿ ದಿಲ್ಲಿಯಿಂದ ಜಬಲ್‌ಪುರಕ್ಕೆ ವರ್ಗಾವಣೆಯಾಗಿರುವ ಅಧಿಕಾರಿ ಗುರ್ಮ್ ಕೋರಿದ್ದಾರೆ. ಸಿಬಿಐ ಅಸ್ತಾನ ಅವರನ್ನು ರಕ್ಷಿಸುತ್ತಿದೆ ಹಾಗೂ ಬೆಂಬಲ ನೀಡುತ್ತಿದೆ. ದೂರನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತಿಲ್ಲ ಎಂಬ ತಾರ್ಕಿಕ ಅನುಮಾನ ನನಗಿದೆ ಎಂದು ಹೆಚ್ಚುವರಿ ಎಸ್‌ಪಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ. ಅಸ್ತಾನ ಅವರನ್ನು ವಜಾಗೊಳಿಸುವಂತೆ ಕೂಡ ಅವರು ಮನವಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News