×
Ad

ಭಟ್ಕಳ: ಕೋಸ್ಟಲ್ ಕಿಂಗ್ ವೆಲ್ಫೇರ್ ಅಸೋಸಿಯೇಶನ್ ನಿಂದ ರಕ್ತದಾನ ಶಿಬಿರ

Update: 2018-10-31 20:42 IST

ಭಟ್ಕಳ, ಅ. 31: ಇಲ್ಲಿನ ಕೋಸ್ಟಲ್ ಕಿಂಗ್ ವೆಲ್ಫೇರ್ ಅಸೋಸಿಯೇಶನ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ರೆಡ್ ಕ್ರಾಸ್ ಸೂಸೈಟಿ ಕುಂದಾಪುರ ಇವರ ಸಹಯೋಗದೊಂದಿಗೆ ನಗರದ ಮದೀನಾ ಕ್ರಿಕೆಟ್ ಮೈದಾನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯದ ಪಶುಸಂಗೋಪನ ಹಾಗೂ ಮೀನುಗಾರಿಕಾ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ, ಕೋಸ್ಟಲ್ ಕಿಂಗ್ ಅಸೋಸಿಯೇಶನ್ ಸಮಾಜಿಕ ಕಾರ್ಯಗಳನ್ನು ಶ್ಲಾಘಿಸಿ ಪ್ರತಿಯೊಬ್ಬರು ಸಾಮಾಜಿಕ ಕಳಕಳಿ ಹೊಂದುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅಸೋಸಿಯೇಶನ್ ವತಿಯಿಂದ ಸಚಿವರಿಗೆ ಶಾಲು ಹಾಕಿ ಸನ್ಮಾನಿಸಲಾಯಿತು.

ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ತಮ್ಮ ರಕ್ತವನ್ನು ದಾನ ಮಾಡಿದರು. ಈ ಸಂದರ್ಭದಲ್ಲಿ  ಕುಂದಾಪು ರೆಡ್ ಕ್ರಾಸ್ ಸೂಸೈಟಿಯ ಅಧ್ಯಕ್ಷ ಜಯಕುಮಾರ್ ಶೇಟ್ಟಿ, ಖಜಾಂಚಿ ಶಿವರಾಮ್ ಶೆಟ್ಟಿ, ಗಣೇಶ್ ಆಚಾರಿ, ವೀರೇಂದ್ರ ಕುಮಾರ್, ಫಯಾಜ್ ಅಲಿ ಬೈಂದೂರು, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಆದಂ ಪಣಂಬೂರು, ಕೋಸ್ಟಲ್ ಕಿಂಗ್ ಅಸೋಸಿಯೇಶನ್  ಅಧ್ಯಕ್ಷ ಇಖ್ಬಾಲ್ ಪಠಾನ್, ವಸಿಯುಲ್ಲಾ ಸಿದ್ದಿಬಾಪ, ಅಬ್ದುಲ್ ಗಫೂರು, ಮೌಲಾನ ಅಶ್ಫಾಖ್ ಪೋತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News