ನ. 5: ಅಂಜುಮನ್ ಇಂಜಿನಿಯರಿಂಗ್ ಕಾಲೇಜ್ ವತಿಯಿಂದ ಪಿಯು ವಿದ್ಯಾರ್ಥಿಗಳಿಗಾಗಿ ಸ್ಟೆಮ್-18 ಫೆಸ್ಟ್
ಭಟ್ಕಳ, ಅ. 31: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ ಮತ್ತು ಮ್ಯಾನೇಜ್ಮೆಂಟ್ (ಎಐಟಿಎಂ) ವತಿಯಿಂದ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸ್ಟೆಮ್-18 ಎಂಬ ಶೀರ್ಷಿಕೆಯಡಿ ನ. 5 ರಂದು ಫೆಸ್ಟ್ ಆಯೋಜಿಸಲಾಗುವುದು ಸಂಸ್ಥೆಯ ಪ್ರಾಂಶುಪಾಲ ಡಾ.ಮುಷ್ತಾಖ್ ಆಹ್ಮದ್ ಭಾವಿಕಟ್ಟೆ ತಿಳಿಸಿದ್ದಾರೆ.
ಅವರು ಸಂಸ್ಥೆಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಫೆಸ್ಟ್ ಕುರಿತಂತೆ ಮಾಹಿತಿ ನೀಡುತ್ತ ಈ ವಿಷಯ ತಿಳಿಸಿದರು. ಇಂತಹ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರಕಿದಂತಾಗುತ್ತದೆ. ತಮ್ಮಲ್ಲಿನ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಸ್ಪರ್ಧೆಗಳು ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಇದರ ಸದೂಪಯೋಗ ಪಡೆದುಕೊಳ್ಳುವಂತೆ ಅವರು ವಿನಂತಿಸಿಕೊಂಡಿದ್ದಾರೆ.
ನಾಲ್ಕು ವಿವಿಧ ಹಂತದ ಸ್ಪರ್ಧೆಗಳು ಈ ಫೆಸ್ಟ್ ಮೂಲಕ ಆಯೋಜಿಸಲಾಗುತ್ತಿದ್ದು, ಇಬ್ಬರು ವಿದ್ಯಾರ್ಥಿಗಳು ಒಂದು ತಂಡವನ್ನಾಗಿ ರಚಿಸಿ ಮೂಲಗಣಿತ (ಬೇಸಿಕ್ ಮ್ಯಾಥ್ಸ್), ಹಾಗೂ ಅನಾಲಿಟಿಕಲ್ ಸ್ಕಿಲ್ ಕುರಿತ ಪರೀಕ್ಷೆಯ ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗುವುದು. ಮಾಡಲ್ ಎಕ್ಸ್ಪೋ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ 2ರಿಂದ 4 ವಿದ್ಯಾರ್ಥಿಗಳು ಒಂದು ತಂಡವನ್ನು ರಚಿಸಿಕೊಳ್ಳಬಹುದು.
ಪಿಯುಸಿ ವಿದ್ಯಾರ್ಥಿಗಳು ಈ ಫೆಸ್ಟ್ ನಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 940415114, 8095708426 ಮತ್ತು 7022132915 ಗೆ ಸಂಪರ್ಕಿಸಬಹುದೆಂದು ಕೋರಲಾಗಿದೆ.