×
Ad

ಚಿರತೆ ಪ್ರತ್ಯಕ್ಷ: ಅಗ್ರಾರ್ ಗ್ರಾಮಸ್ಥರ ಆತಂಕ !

Update: 2018-10-31 20:51 IST

ಬಂಟ್ವಾಳ, ಅ. 31: ತಾಲೂಕಿನ ಅಗ್ರಾರ್ ಚರ್ಚ್‍ನ ಪರಿಸರದಲ್ಲಿ ಮಂಗಳವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ವರದಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಪೊನ್ನಂಗಿಲ ನಿವಾಸಿ ವಿನ್ಸೆಂಟ್ ಕಾರ್ಲೊ ಎಂಬವರು ಅಗ್ರಾರ್ ಚರ್ಚ್‍ನಿಂದ ಮನೆಯ ಕಡೆ ತೆರಳುತ್ತಿದ್ದ ಚಿರತೆ ಪ್ರತ್ಯಕ್ಷವಾಗಿದೆ ಎಂದು ಹೇಳಲಾಗುತ್ತಿದೆ. ತದನಂತರ ಚಿರತೆಯು ಸಮೀಪದ ಮರಕ್ಕೆ ಹತ್ತಿದೆ ಎಂದು ಕಾರ್ಲೊ ಅವರು ತಿಳಿಸಿದ್ದಾರೆ.

ಕಾರ್ಲೊ ಅವರು ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಚಿರತೆ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಅಗ್ರಾರ್ ಗ್ರಾಮದ ಸುಮಾರು ಐದಕ್ಕೂ ಹೆಚ್ಚು ಮನೆಯ ನಾಯಿಗಳು ನಾಪತ್ತೆಯಾಗಿವೆ ಎಂದು ಅಗ್ರಾರ್ ನಿವಾಸಿಗಳಾದ ಮೇರಿ ಟೀಚರ್, ರಾಂಪಣ್ಣ ಪೂಜಾರಿ ಅವರು ದೂರಿದ್ದು, ಹೀಗಾಗಿ ನಾಯಿ ಬೇಟೆಯಾಡಲು ಬಂದಿರಬಹುದು ಎಂದು ಶಂಕಿಸಲಾಗಿದೆ.

ಚಿರತೆಯ ಬಗ್ಗೆ ಆತಂಕರಾಗಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News