ಗಾಯಕ ಪಿ.ಎಂ. ಹಸನಬ್ಬ ಅವರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Update: 2018-10-31 15:27 GMT
ಪಿ.ಎಂ. ಹಸನಬ್ಬ

ಮೂಡಬಿದಿರೆ, ಅ.31: ಗಾಯಕ, 'ಆಶಾಕಿರಣ್ ಮೆಲೋಡೀಸ್' ಸ್ಥಾಪಕ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಮೂಡಬಿದಿರೆಯ ಪಿ.ಎಂ. ಹಸನಬ್ಬ ಅವರು ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರು ನಾಟಕಕಾರ, ಸಂಗೀತ ಸ್ವರ ಸಂಯೋಜಕ/ನಿರ್ದೇಶಕರು,. ಬ್ಯಾರಿ ಭಾಷೆಯಲ್ಲಿ ಪೊಣ್‍ಚಿರಿಕೆ, ಅಪ್ಪ ಚುಡು ಪಾತುಮ್ಮ ಎಂಬ ಧ್ವನಿ ಸುರುಳಿಗಳನ್ನು ರೂಪಿಸಿದ್ದಾರೆ.

ಬ್ಯಾರಿ ಚಲನಚಿತ್ರದಲ್ಲಿ ನಟಿಸಿರುವ ಅವರು 'ಸಹನ ನಮ್ಮೂರುದ ಪೊಣ್ಣು' ಟೆಲಿಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ. 'ಈ ಟಿವಿ ಕನ್ನಡ' 2016ರಲ್ಲಿ ಏರ್ಪಡಿಸಿದ 'ಹಾಡಿಗೊಂಡು ಹಾಡು' ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಹಮ್ಮದ್ ರಫಿ, ಮುಖೇಶ್ ಅವರ ಶೈಲಿಯಲ್ಲಿ ಹಾಡುವುದರಲ್ಲಿ  ಹಸನಬ್ಬ ಅವರಿಗೆ ವಿಶೇಷ ಹೆಸರಿದೆ.

ಮೂಡಬಿದಿರೆಯಲ್ಲಿ 'ಕರೋಕೆ' ಗಾಯನ ಸ್ಪರ್ಧೆಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕಾಟಿಪಳ್ಳ ಮದ್ರಸಾದಲ್ಲಿ ಈದ್ ಮಿಲಾದ್ ಗಾಯನ ಸ್ಪರ್ಧೆಯಲ್ಲಿ ನಿರಂತರ 9 ವರ್ಷ ಪ್ರಥಮ ಸ್ಥಾನ ಗಳಿಸಿದ್ದಾರೆ.  ಇವರು ರಚಿಸಿದ 'ಮದ್ಮೆ ಮಸಣೊಡು' ಮತ್ತು 'ಸುಮಂಗಲ' ನಾಟಕಗಳಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಬಂದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News