ದಿಲ್ಲಿಯಲ್ಲಿ ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅನುಮತಿ: ಸುಪ್ರೀಂ ಸ್ಪಷ್ಟನೆ

Update: 2018-10-31 16:38 GMT

ಹೊಸದಿಲ್ಲಿ, ಅ.31: ಪರಿಸರ ಸ್ನೇಹೀ ಹಸಿರು ಪಟಾಕಿಯ ಹೊರತಾಗಿ ಇತರ ಪಟಾಕಿಗಳನ್ನು ಈ ಬಾರಿಯ ದೀಪಾವಳಿ ಹಬ್ಬದ ಅವಧಿಯಲ್ಲಿ ದಿಲ್ಲಿ - ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟನೆ ನೀಡಿದೆ.

ಈಗಾಗಲೇ ಉತ್ಪಾದಿಸಲಾಗಿರುವ ಇತರ ಪಟಾಕಿಗಳನ್ನು ಈ ದೀಪಾವಳಿ ಸೀಸನ್‌ನಲ್ಲಿ ದೇಶದ ಇತರೆಡೆ ಮಾರಾಟ ಮಾಡಬಹುದಾಗಿದೆ ಎಂದು ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ತಿಳಿಸಿದೆ. ತಮಿಳುನಾಡು, ಪುದುಚೇರಿ ಹಾಗೂ ಇತರ ದಕ್ಷಿಣದ ರಾಜ್ಯಗಳಲ್ಲಿ ಪಟಾಕಿಗಳನ್ನು ಹಬ್ಬದ ಅವಧಿಯಲ್ಲಿ ಬೆಳಿಗ್ಗೆ 4ರಿಂದ 5 ಗಂಟೆಯವರೆಗೆ ಹಾಗೂ ರಾತ್ರಿ 9ರಿಂದ 10 ಗಂಟೆಯವರೆಗೆ ಸುಡಬಹುದು. ದೇಶದಾದ್ಯಂತ ಪಟಾಕಿ ಸಿಡಿಸುವ ಅವಧಿ ಎರಡು ಗಂಟೆಯಾಗಿರುತ್ತದೆ. ಅಲ್ಲದೆ ಆನ್‌ಲೈನ್ ಮೂಲಕ ಪಟಾಕಿ ಮಾರಾಟ ನಡೆಸುವುದಕ್ಕೆ ದೇಶದಾದ್ಯಂತ ನಿಷೇಧ ಹೇರಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News