ಝುಬೈರ್ ಸಾಹೇಬ್ ಪರ್ಕಳ ನಿಧನ

Update: 2018-10-31 17:29 GMT

ಪರ್ಕಳ, ಅ. 31 : ಇಲ್ಲಿನ ದೇವಿನಗರ ನಿವಾಸಿ ಝುಬೈರ್ ಸಾಹೇಬ್ ಅವರು ಹೃದಯಾಘಾತದಿಂದ ಬುಧವಾರ ಮಧ್ಯಾಹ್ನ ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಅಡುಗೆ ಮತ್ತು ಕ್ಯಾಟರಿಂಗ್ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯಾದ್ಯಂತ ಹೆಸರುಗಳಿಸಿದ್ದ ಝುಬೈರ್ ಸಾಹೇಬರು, ಧಾರ್ಮಿಕ ಹಾಗು ಸೇವಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿ ಮುಂಚೂಣಿಯಲ್ಲಿರುತ್ತಿದ್ದರು.

ಸರಳ, ಸಜ್ಜನ ವ್ಯಕ್ತಿತ್ವದ ಪರೋಪಕಾರಿ ಸ್ವಭಾವದ ಝುಬೈರ್ ಸಾಹೇಬರು ಪತ್ನಿ, ನಾಲ್ವರು ಪುತ್ರರು ಹಾಗು ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಆತ್ರಾಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಖಬರ್ ಸ್ತಾನದಲ್ಲಿ  ಬುಧವಾರ ರಾತ್ರಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News