ಝೆಕ್‌ಗೆ ಕ್ವಿಟೋವಾ, ಪ್ಲಿಸ್ಕೋವಾ ಸಾರಥ್ಯ
ಪರಾಗ್ವೆ, ಅ.31: ಪರಾಗ್ವೆಯಲ್ಲಿ ನ.10-11ರಂದು ಹಾಲಿ ಚಾಂಪಿಯನ್ ಅಮೆರಿಕದ ವಿರುದ್ದ ನಡೆಯುವ ಫೆಡ್ ಕಪ್ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವಾ ಹಾಗೂ ಕರೊಲಿನಾ ಪ್ಲಿಸ್ಕೋವಾ ಝೆಕ್ ಗಣರಾಜ್ಯದ ನೇತೃತ್ವವಹಿಸಲಿದ್ದಾರೆ.
ಕ್ರಮವಾಗಿ ವಿಶ್ವದ ನಂ.7 ಹಾಗೂ 8ನೇ ಸ್ಥಾನದಲ್ಲಿರುವ ಕ್ವಿಟೋವಾ ಹಾಗೂ ಪ್ಲಿಸ್ಕೋವಾ 31ನೇ ರ್ಯಾಂಕಿನ ಕಟೆರಿನಾ ಸಿನಿಯಾಕೊವಾ ಹಾಗೂ 33ನೇ ರ್ಯಾಂಕಿನ ಬರ್ಬೊರಾ ಸ್ಟ್ರೈಕೊವಾರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ. ಫೆಡ್ ಕಪ್ ಇತಿಹಾಸದಲ್ಲಿ ಎರಡು ಯಶಸ್ವಿ ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ. ಅಮೆರಿಕ 18 ಬಾರಿ ಟ್ರೋಫಿ ಜಯಿಸಿದ್ದರೆ, ಝೆಕ್ ಗಣರಾಜ್ಯ 10 ಬಾರಿ ಪ್ರಶಸ್ತಿ ಜಯಿಸಿದೆ. ಅಮೆರಿಕ ಕಳೆದ ವರ್ಷ ಫೈನಲ್‌ನಲ್ಲಿ ಬೆಲಾರಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಝೆಕ್ ಗಣರಾಜ್ಯ ಸೆಮಿ ಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು. ಕ್ವಿಟೋವಾ ಹಾಗೂ ಪ್ಲಿಸ್ಕೋವಾ ನೇತೃತ್ವದಲ್ಲಿ ಝೆಕ್ ತಂಡ ಮೂರು ಫೈನಲ್ ಸೇರಿದಂತೆ ಕಳೆದ ಏಳು ಆವೃತ್ತಿಗಳಲ್ಲಿ 5ರಲ್ಲಿ ಜಯ ದಾಖಲಿಸಿದೆ.