×
Ad

ಸಕಲೇಶಪುರದಲ್ಲಿ ಅಪಘಾತ: ಪುತ್ತೂರು ಕಾನೂನು ಕಾಲೇಜಿನ ವಿದ್ಯಾರ್ಥಿ ಮೃತ್ಯು

Update: 2018-11-01 12:18 IST

ಉಪ್ಪಿನಂಗಡಿ, ನ.1: ಸಕಲೇಶಪುರದಲ್ಲಿ ಇಂದು ಬೆಳಗ್ಗೆ ನಡೆದ ವಾಹನ ಅಪಘಾತದಲ್ಲಿ ಪುತ್ತೂರಿನ ಕಾನೂನು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟಿರುವುದು ವರದಿಯಾಗಿದೆ.

ಉಪ್ಪಿನಂಗಡಿ ಸಮೀಪದ ಕೊಯ್ಲದ ಉದಯ ಭಟ್ ಎಂಬವರ ಪುತ್ರ ಉಜ್ವಲ್ ಮೃತಪಟ್ಟ ಯುವಕ. ಪುತ್ತೂರಿನ ವಿವೇಕಾನಂದ ಕಾನೂನು ವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಉಜ್ವಲ್ ಅವರು ಸಕಲೇಶಪುರದ ಕುಂಬಾರಕಟ್ಟೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News