ವಿದೇಶಕ್ಕೆ ತೆರಳಲು ತುರ್ತು ವಿಚಾರಣೆ ಕೋರಿ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ
Update: 2018-11-01 12:45 IST
ಹೊಸದಿಲ್ಲಿ, ನ.1: ತನಗೆ ವಿದೇಶಕ್ಕೆ ತೆರಳಬೇಕಾಗಿದ್ದು, ಹಾಗಾಗಿ ತಾನು ಸಲ್ಲಿಸಿರುವ ಅರ್ಜಿಯನ್ನು ನಾಳೆಯೇ ವಿಚಾರಣೆ ನಡೆಸಲು ಕೋರಿ ಕಾರ್ತಿ ಚಿದಂಬರಂ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ.
ತನ್ನ ಕಕ್ಷಿಗಾರ ನ.3ರಂದು ವಿದೇಶಕ್ಕೆ ತೆರಳಲು ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕೆ ನ್ಯಾಯಾಲಯದ ಅನುಮತಿ ಬೇಕು ಎಂದು ಕಾರ್ತಿ ಪರ ವಕೀಲರು ತುರ್ತು ವಿಚಾರಣೆಗೆ ಆಗ್ರಹಿಸಿದರು.
ಶುಕ್ರವಾರವೇ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿರು ಹೆಚ್ಚಿನ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿರುವ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್, ‘‘ಎಲ್ಲ ನ್ಯಾಯಾಧೀಶರ ಬಳಿ ತಾವು ನಿಭಾಯಿಸುವುದಕ್ಕಿಂತ ಹೆಚ್ಚು ಕೆಲಸವಿದೆ’’ ಎಂದರು.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಕಾರ್ತಿ ವಿರುದ್ಧ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸುತ್ತಿದೆ.