ಫಾದರ್ ಮುಲ್ಲರ್ಸ್ ಸಾಲ್ವರ್ ಮೊಂತೇರೊ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ ಉದ್ಘಾಟನೆ
ಮಂಗಳೂರು, ನ.1: ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ 138 ವರ್ಷಗಳ ಅರೋಗ್ಯ ಸೇವಾ ಕ್ಷೇತ್ರದಲ್ಲಿ ಇನ್ನೊಂದು ಹೆಜ್ಜೆಯಾಗಿ ಬಜ್ಪೆಯಲ್ಲಿ ಆರಂಭಿಸಿರುವ ಫಾದರ್ ಮುಲ್ಲರ್ಸ್ ಸಾಲ್ವದೊರ್ ಮೊಂತೇರೊ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡಿತು.
ಸ್ಥಳದಾನಿ ಸಾಲ್ವದೊರ್ ಮೊಂತೆರೊ ದಂಪತಿ ನೂತನ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು.
ಕೇಂದ್ರದ ಫಲಕವನ್ನು ಮಾಜಿ ಶಾಸಕ ಜೆ.ಆರ್.ಲೋಬೊ ಅನಾವರಣಗೊಳಿಸಿದರು.
ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ಮೊದಲ ಮಹಡಿಯನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ಉದ್ಘಾಟಿಸಿದರು.
ಮಂಗಳೂರು ಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನ ಅವರು ಫಾದರ್ ಮುಲ್ಲರ್ಸ್ ಸಾಲ್ವದೊರ್ ಮೊಂತೆರೊ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಪ್ರಾರ್ಥನಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರೆ.ಫಾ.ಮಾರ್ಸೆಲ್ ಸಲ್ದಾನ, ಬಜ್ಪೆಯ ಸಂತ ಜೋಸೆಫ್ ಚರ್ಚ್ ನ ರೆ.ಫಾದರ್ ಲಿಯೊ, ವಿಲಿಯಂ ಲೋಬೊ, ಎ.ಜೆ. ಆಸ್ಪತ್ರೆಯ ಸಹಾಯಕ ಡೀನ್ ಡಾ.ಪ್ರೊ.ಫ್ರಾನ್ಸಿಸ್ ಮೊಂತೆರೊ, ದ.ಕ. ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ, ತಾಪಂ ಸದಸ್ಯ ವಿಶ್ವನಾಥ ಶೆಟ್ಟಿ, ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ, ಪಿಡಿಒ ರೋಶಿನಿ, ಕಂದಾವರ ಗ್ರಾಪಂ ಸದಸ್ಯರಾದ ವಿಮಲಾ, ಶಿವಶಂಕರ್, ರಾಘವೇಂದ್ರ ಮತ್ತಿತರರಿದ್ದರು.
ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಮಂಗಳೂರು ಕನ್‌ಸ್ಟ್ರಕ್ಷನ್‌ನ ಏಕನಾಥ, ಹರಿಪ್ರಸಾದ್, ರಾಜೇಶ್ ಮೇಸ್ತ್ರಿ, ಮ್ಯಾಕ್ಸಿ ಕ್ರಾಸ್ತಾ, ವಿನ್ಸೆಂಟ್ ಪಿಂಟೋ, ಆಲ್ವೀನ್ ಡಿಸೋಜ, ಸೂರಜ್ ರಾಜ್, ಕಮಲಾಕ್ಷ, ವೇಣುಗೋಪಾಲ ಕೊಟ್ಟಾರಿ ಅವರನ್ನು ಇದೇ ಸಂದರ್ಭ ಸಚಿವ ಯು.ಟಿ.ಖಾದರ್ ಅಭಿನಂದಿಸಿದರು.
ಸನ್ಮಾನ: ಕಟ್ಟಡಕ್ಕೆ ಜಾಗವನ್ನು ದಾನವಾಗಿ ನೀಡಿದ ಸಾಲ್ವದೊರ್ ಮೊಂತೆರೊ ದಂಪತಿಯನ್ನು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ, ಸಚಿವ ಯು.ಟಿ.ಖಾದರ್, ಶಾಸಕ ಭರತ್ ಶೆಟ್ಟಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು