ವಿಟ್ಲ ಪರ್ತಿಪ್ಪಾಡಿ ಮಸೀದಿಯಲ್ಲಿ ನ.8ರಂದು ಆಧ್ಯಾತ್ಮಿಕ ಸಂಗಮ
Update: 2018-11-01 13:54 IST
ವಿಟ್ಲ, ನ.1: ಎಸ್.ವೈ.ಎಸ್. ಹಾಗೂ ಎಸ್ಕೆಎಸ್ಸೆಸ್ಸೆಎಫ್ ನ ವಿಟ್ಲ-ಪರ್ತಿಪ್ಪಾಡಿ ಶಾಖೆಯ ಜಂಟಿ ಆಶ್ರಯದಲ್ಲಿ ಮಜ್ಲಿಸುನ್ನೂರು ಮತ್ತು ಆಧ್ಯಾತ್ಮಿಕ ಸಂಗಮ, ಉಮ್ಮುಲ್ ಕುರ್ ಆನ್ ಕಾರ್ಯಕ್ರಮವು ನ.8ರಂದು ಮಗ್ರಿಬ್ ನಮಾಝ್ ಬಳಿಕ ಪರ್ತಿಪ್ಪಾಡಿ ಜುಮಾ ಮಸೀದಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಖತೀಬ್ ಜಿ.ಎಂ.ಅಬ್ದುರ್ರಹಿಮಾನ್ ಫೈಝಿ ವಹಿಸುವರು. ಸೈಯದ್ ಶಮೀಮ್ ತಂಙಳ್ ಕುಂಬೋಳ್ ನೇತೃತ್ವ ವಹಿಸುವರು. ಉಮ್ಮುಲ್ ಕುರ್ ಆನ್ ನ ವಿಷಯ ಮಂಡನೆಯನ್ನು ರಫೀಕ್ ಬಾಖವಿ ಮಠ ನೆರವೇರಿಸುವರು ಎಂದು ಪ್ರಕಟನೆ ತಿಳಿಸಿದೆ.