×
Ad

ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್: ರಾಜ್ಯೋತ್ಸವ

Update: 2018-11-01 17:56 IST

ಮಂಗಳೂರು, ನ. 1: ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲ ಹಳೆಕೋಟೆಯ ಸೈಯದ್ ಮದನಿ ಉರ್ದು ಹಿ.ಪ್ರಾ ಮತ್ತು ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ ಧ್ವಜಾರೋಹಣಗೈದರು. 

ಈ ಸಂದರ್ಭ ಯೆನೆಪೊಯ ಮೆಡಿಕಲ್ ಕಾಲೇಜಿನಿಂದ ಶಾಲೆಗೆ 3 ಕಂಪ್ಯೂಟರ್‌ಗಳನ್ನು ಮ್ಯಾನೇಜರ್ ಹಸ್ತಾಂತರಿಸಿದರು.

ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯು.ಎನ್. ಇಬ್ರಾಹೀಂ, ಶಾಲಾ ಸಂಚಾಲಕ ಮುಹಮ್ಮದ್ ಇಸ್ಮಾಯೀಲ್ ಹಾಜಬ್ಬ, ಕೋಶಾಧಿಕಾರಿ ಕರೀಂ ಯು.ಎಚ್., ಶಾಲಾಭಿವೃಧ್ಧಿ ಸಮಿತಿಯ ಸದಸ್ಯರಾದ ಫಾರೂಕ್ ಯು.ಎಚ್, ಮುಹಮ್ಮದ್ ಯು. ಎಚ್, ಅಲ್ತಾಫ್ ಯು.ಎಚ್, ಯೆನೆಪೊಯ ದಂತ ಕಾಲೇಜಿನ ಸಂಯೋಜಕ ಭರತ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿಯರಾದ ಅರುಣಾಕ್ಷಿ ವಂದಿಸಿದರು. ದಿವ್ಯಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News