ಮಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಿಂದ 25ನೇ ವರ್ಷಾಚರಣೆ
ಮಂಗಳೂರು, ನ.1: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಿಂದ 25ನೇ ವರ್ಷಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ನಗರದ ಫಳ್ನೀರ್‌ನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಖಾಯಂ ಗ್ರಾಹಕ ಅಭಿಷೇಕ್ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಕಾರ್ತಿಕ್, 25 ವರ್ಷಗಳ ಸಮಯದಲ್ಲಿ ಜಗತ್ತಿನಾದ್ಯಂತ 10 ರಾಷ್ಟ್ರಗಳಲ್ಲಿ ಮಲಬಾರ್‌ನ 250 ಮಳಿಗೆಗಳು ಕಾರ್ಯಾಚರಿಸುತ್ತಿವೆ. ಭವಿಷ್ಯದಲ್ಲಿ ಕೆನಡಾ, ಸಂಯುಕ್ತ ಸಂಸ್ಥಾನ ಅಮೆರಿಕ, ನ್ಯೂಜಿಲ್ಯಾಂಡ್ ಸೇರಿದಂತೆ ವಿಶ್ವಾದ್ಯಂತ ಮಲಬಾರ್ ಮಳಿಗೆಗಳು ತಲೆ ಎತ್ತಲಿವೆ. ಸಂಸ್ಥೆಯಿಂದ ಗ್ರಾಹಕರಿಗೆ ರಾಜ್ಯೋತ್ಸವದ ಶುಭಾಶಯ ಹಾಗೂ ಗ್ರಾಹಕರಿಗೆ ಸಂಸ್ಥೆ ಚಿರಋಣಿ ಎಂದರು.
ವರ್ಷಾಚರಣೆ ಉದ್ಘಾಟಿಸಿ ಮಾತನಾಡಿದ ಗ್ರಾಹಕ ಅಭಿಷೇಕ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯು ಮಂಗಳೂರಿನಲ್ಲಿ ಸ್ಥಾಪನೆಯಾದ ನಂತರ ಇಲ್ಲಿಯವರೆಗೆ ನಿರಂತರವಾಗಿ ಖರೀದಿ ಮಾಡುತ್ತಿದ್ದೇವೆ. ಇಲ್ಲಿನ ಉತ್ಪನ್ನ ಹಾಗೂ ಸೇವೆ ಉತ್ತಮವಾಗಿದೆ. ಗ್ರಾಹಕರಿಗೆ ಮನ ಒಪ್ಪುವ ರೀತಿಯಲ್ಲಿ ಸಂಸ್ಥೆ ಸೇವೆ ಒದಗಿಸುತ್ತಿದೆ. ಸಂಸ್ಥೆಯ ಮಳಿಗೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸ್ಟೋರ್ ಡೈರೆಕ್ಟರ್ ಎಂ.ಪಿ. ಝುಬೈರ್ ಅಹ್ಮದ್, ಸ್ಟೋರ್ ಹೆಡ್ ಶರತ್ ಚಂದ್ರನ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ದೀಪಾವಳಿ ಪ್ರಯುಕ್ತ ಆಫರ್
ದೀಪಾವಳಿ ಮತ್ತು ವರ್ಷಾಚರಣೆ ಪ್ರಯುಕ್ತ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಗಳಲ್ಲಿ ಪ್ರತಿ 10 ಸಾವಿರ ರೂ. ಮೌಲ್ಯದ ಆಭರಣ ಖರೀದಿಸಿದರೆ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುವುದು. ಈ ಕೊಡುಗೆ ನ.25ರವರೆಗೆ ಲಭ್ಯವಿರಲಿದೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಕಾರ್ತಿಕ್ ತಿಳಿಸಿದ್ದಾರೆ.