ರಸ್ತೆ ಅಪಘಾತ: ಉದ್ಯಮಿ ಮುಝಪ್ಪರ್ ಕೋಲಾರ ಪತ್ನಿ ಮೃತ್ಯು; ಮೂವರಿಗೆ ಗಾಯ
Update: 2018-11-02 17:36 IST
ಭಟ್ಕಳ, ನ. 2: ಮಹಾರಾಷ್ಟ್ರದ ಸತಾರ ಟೋಲ್ ನಾಕದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಭಟ್ಕಳದ ಖ್ಯಾತ ಉದ್ಯಮಿ ಮುಝಪ್ಫರ್ ಕೋಲಾ ಅವರ ಪತ್ನಿ ಆಮಿನಾ ಕೋಲಾ (63) ಮೃತಪಟ್ಟಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಮುಝಫ್ಫರ್ ಕೋಲಾ ಅವರ ಕುಟುಂಬ ಮೂಲಗಳ ಪ್ರಕಾರ, ಮೂರು ಪ್ರತ್ಯೇಕ ಕಾರುಗಳಲ್ಲಿ ಮಹಾರಾಷ್ಟ್ರದ ವಿವಿಧ ಪ್ರೇಕ್ಷಣೀಯ ಸ್ಥಳದ ಪ್ರವಾಸ ಮಾಡಿ ಭಟ್ಕಳಕ್ಕೆ ಹಿಂತಿರುಗುತ್ತಿದ್ದಾಗ ಸತಾರ ಬಳಿಯ ಟೋಲ್ ನಾಕಾ ಬಳಿ ನಿಂತಿದ್ದ ಲಾರಿಗೆ ಅವರ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.