×
Ad

ಎಸ್ಕೆಎಸ್ಸೆಸ್ಸೆಫ್ ಮಾಣಿ ಕ್ಲಸ್ಟರ್: ಲಹರಿ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Update: 2018-11-02 18:06 IST

ಬಂಟ್ವಾಳ, ನ. 2: ಎಸ್ಕೆಎಸ್ಸೆಸ್ಸೆಫ್ ಮಾಣಿ ಕ್ಲಸ್ಟರ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರೋಗ್ಯ ಕರ್ನಾಟಕಕ್ಕೆ ಯುವಜನ "ಹ್ಯೂಮನ್ ಸರ್ಕಲ್" ಲಹರಿ ವಿರುದ್ಧ ಜನಜಾಗೃತಿ ಕಾರ್ಯಕ್ರಮವು ಮಾಣಿ ಜಂಕ್ಷನ್‍ನಲ್ಲಿ ನಡೆಯಿತು.

ಪುತ್ತೂರು-ಸಂಪ್ಯ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಮಾಣಿ ಕ್ಲಸ್ಟರ್ ಅಧ್ಯಕ್ಷ ಮೂಸಾ ಕರೀಂ ಅಧ್ಯಕ್ಷತೆ ವಹಿಸಿದ್ದರು. ಫರಂಗಿಪೇಟೆ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶೈಖ್ ಇರ್ಫಾನಿ ಹಾಗೂ ಮಾಣಿ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಪಿ.ಜೆ. ಅಬ್ದುಲ್ ಅಝೀಝ್ ಮುಖ್ಯ ಭಾಷಣಗೈದರು.

ಕಾರ್ಯಕ್ರಮದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಮಾಣಿ ಗ್ರಾಪಂ ಸದಸ್ಯ ನಾರಾಯಣ ಶೆಟ್ಟಿ ತೋಟ, ಹಾಜಿ ಕೆ. ಇಬ್ರಾಹಿಂ, ಮುಹಮ್ಮದ್ ಅಲಿ ಮುಸ್ಲಿಯಾರ್ ಸೂರಿಕುಮೇರು, ಅಹ್ಮದ್ ನಿಝಾರ್ ಮೌಲವಿ ಸತ್ತಿಕಲ್ಲು ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News