×
Ad

ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ತನ್ನ ಬಹುಮುಖ್ಯ ಗುರಿ: ಸಚಿವ ಖಾದರ್

Update: 2018-11-02 18:14 IST

ಉಳ್ಳಾಲ, ನ. 2: ಶಾಶ್ವತ ಕುಡಿಯುವ ನೀರಿನ ಯೋಜನೆ  ತನ್ನ ಕ್ಷೇತ್ರಕ್ಕೆ ಒದಗಿಸುವುದು ಬಹುಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ  170 ಕೋಟಿ ಅನುದಾನವನ್ನು  ಈಗಿನ ಸರಕಾರವೂ  ಬಿಡುಗಡೆಗೊಳಿಸುವ  ಎಲ್ಲಾ ಪ್ರಕ್ರಿಯೆಗಳು ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಅವರು ಮಂಜನಾಡಿ ಗ್ರಾಮ ಪಂಚಾಯಿತಿನ ದಿ. ಯು.ಟಿ . ಫರೀದ್ ಸಭಾಂಗಣ ಮತ್ತು ಗ್ರಾಮಸ್ಥರಿಗೆ ಹಕ್ಕುಪತ್ರವನ್ನು ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಜನಾಡಿ ಗ್ರಾಮದ 800 ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಒಂದು ಮನೆಯಲ್ಲಿ ನಾಲ್ವರಂತೆ 2,400 ಮಂದಿಗೆ ಸ್ವಾಭಿಮಾನ ದ ಬದುಕು ನೀಡುವ ಕೆಲಸ  ಸರಕಾರದಿಂದ ಆಗಿದೆ. ಆಧಾರ ಅನ್ನುವುದು ಯಾರಿಗೂ ಇರಲಿಲ್ಲ.  ಕುಮಾರಸ್ವಾಮಿ ಸರಕಾರವೂ ಹಿಂದಿನ ಸರಕಾರದ  ಕಾರ್ಯಕ್ರಮ ಗಳನ್ನು ಮುಂದುವರಿಸುತ್ತಾ ಬರುತ್ತಿದೆ. ರೇಷನ್ ಕಾರ್ಡು ಎಲ್ಲರಲ್ಲಿಯೂ ಇದೆ. 35 ಲಕ್ಷ ಕುಟುಂಬಗಳಿಗೆ ರೇಷನ್ ಕಾರ್ಡು ಕೊಡುವ ಕೆಲಸ ತನ್ನ ಅವಧಿ ಯಲ್ಲಿ ನಡೆದಿದೆ.  ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವಂತಹ ಕೆಲಸ ಜನರಿಂದ ಆಗಬೇಕಿದೆ. 

ನೇತ್ರಾವತಿಯಲ್ಲಿ ನೀರಿನ ಕೊರತೆಯಾದರೂ, ಅಣೆಕಟ್ಟು ನಿರ್ಮಾಣದ ಮೂಲಕ ಅದು ಬಗೆ ಹರಿಯ ಲಿದೆ. ಈ ಮೂಲಕ 30 ವರ್ಷಕ್ಕೆ ಕುಡಿಯುವ ನೀರಿಗಾಗಿ ಯಾವುದೇ ರೀತಿಯ ತೊಂದರೆಯಾಗದು ಎಂದರು.

ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ಎರಡು ಹೈಸ್ಕೂಲ್ ಇರುವ ಏಕೈಕ ಗ್ರಾಮ ಮಂಜನಾಡಿಯಾಗಿದೆ. ಅಭಿವೃದ್ಧಿಯಲ್ಲಿ ಮಂಜನಾಡಿ ಗ್ರಾ.ಪಂ ಮುಂಚೂಣಿಯಲ್ಲಿದೆ‌. ಎಲ್ಲಾ ಮೂಲಭೂತ ಸೌಕರ್ಯಗಳಿರುವ ಗ್ರಾಮದ ಅಭಿವೃದ್ಧಿ ಗೆ ಸಚಿವರ ಕೊಡುಗೆ ಬಹಳವಿದೆ. 10 ದಿನ ಬಳ್ಳಾರಿಯಲ್ಲಿ  ಚುನಾವಣಾ ಪ್ರಚಾರದ ಲ್ಲಿ ತೊಡಗಿಸಿಕೊಂಡ ಏಕೈಕ ಕ್ಯಾಬಿನೆಟ್ ಸಚಿವರು ಹೈಕಮಾಂಡ್ ಸೂಚನೆಯಂತೆ  ಶ್ರಮವಹಿಸಿ ದುಡಿದಿದ್ದಾರೆ.

ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಅಸೈ ಅಧ್ಯಕ್ಷತೆ ವಹಿಸಿ ಮಾತನಾಡಿ ಒಂದೂವರೆ ಕೋಟಿ ಅನುದಾನ ಒದಗಿಸುವ ಮೂಲಕ ಸುಸಜ್ಜಿತ ಸಭಾಂಗಣ ನಿರ್ಮಾಣ ಸಾಧ್ಯವಾಗಿದೆ. ಅಭಿವೃದ್ಧಿಗೆ ಕೆಲ ಒಳರಸ್ತೆಗಳು  ಹಾಗೂ ಇನ್ನೂ ಹಲವರಿಗೆ ಹಕ್ಕುಪತ್ರ ನೀಡಲು ಬಾಕಿಯಿದ್ದು, ಸಚಿವರು ಹೆಚ್ಚಿನ  ಮುತುವರ್ಜಿ ವಹಿಸಿ ಅದನ್ನು ಈಡೇರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಯು.ಟಿ ಖಾದರ್,  ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮೊಹಮ್ಮದ್ ಅಸೈ ಮತ್ತು ಮಾಜಿ. ಜಿ.ಪಂ ಸದಸ್ಯ ಎನ್.ಎಸ್ ಕರೀಂ ರವರನ್ನು ಸನ್ಮಾನಿಸಲಾಯಿತು.

ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು,  ಜಿ.ಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ತಾ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್,  ಉಪಾಧ್ಯಕ್ಷೆ ಮರಿಯಮ್ಮ, ತಾ.ಪಂ ಮಾಜಿ ಸದಸ್ಯ  ಹಾಗೂ ವಕ್ಫ್ ಬೋಡ್ ೯ ಜಿಲ್ಲಾ ಉಪಾಧ್ಯಕ್ಷ ನಕ್ಕರೆ ಬಾವು, ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರ್,  ಕಿನ್ಯಾ ಗ್ರಾ.ಪಂ ಅಧ್ಯಕ್ಷ ಸಿರಾಜ್ ಕಿನ್ಯಾ, ಪಂ. ಸದಸ್ಯರುಗಳಾದ  ಅಬ್ಬಾಸ್, ಬಾವು, ಅಶ್ರಫ್ ಕೆ.ಪಿ, ಇಲ್ಯಾಸ್, ಗೀತಾ ನಾಯಕ್, ಪ್ರೇಮಾ, ನಳಿನಾಕ್ಷಿ, ಮಾಲತಿ, ಇಸ್ಮಾಯಿಲ್ ಬಾವು, ಅಬ್ದುಲ್‌ಖಾದರ್ ಮುಂತಾದವರು ಉಪಸ್ಥಿತರಿದ್ದರು. 

ಗ್ರಾ.ಪಂ ಮಾಜಿ ಅಧ್ಯಕ್ಷ ಇಸ್ಮಾಯಿಲ್ ದೊಡ್ಡಮನೆ ಸ್ವಾಗತಿಸಿದರು.ಪಿಡಿಓ ಮಂಜಪ್ಪ‌ಎಚ್.ಎಚ್‌ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News