×
Ad

ಮಂಗಳೂರು: ಇಂಡಿಯನ್ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್‌ಗೆ ಚಾಲನೆ

Update: 2018-11-02 20:11 IST

ಮಂಗಳೂರು, ನ.2: ನಗರದ ನವಭಾರತ ಸರ್ಕಲ್ ಬಳಿಯ ಟಿ.ವಿ. ರಮಣ ಪೈ ಕನ್ವೆನ್‌ಶನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್‌ಗೆ ಶುಕ್ರವಾರ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.

ಐಐಟಿಇ ವತಿಯಿಂದ ನಡೆಯುವ ಈ ಎಕ್ಸಿಬಿಷನ್‌ನಲ್ಲಿ ಸಾರಿಗೆ, ಪ್ರವಾಸ, ರೈಲ್ವೇಸ್, ಆತಿಥ್ಯ ಮತ್ತಿತರ ಪೂರಕವಾದ ಸಂಗತಿಗಳ ಬಗ್ಗೆ ಜನರಿಗೆ ಪರಿಚ ಯಿಸಲಾಗುತ್ತದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರಗಳು, ಹೊಟೇಲ್‌ಗಳು, ರಿಸೋರ್ಟ್‌ಗಳು ಮತ್ತಿತರ ಸೇವೆಗಳು, ಪ್ರವಾಸದ ಸಂಯೋಜಕರು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳನ್ನು ಪೂರೈಸುವವರ ಕುರಿತಾದ ವಿಸ್ತೃತ ಮಾಹಿತಿ ಒದಗಿಸಲಾಗುತ್ತದೆ.

ಜಾರ್ಕಂಡ್, ಬೆಂಗಾಲ್, ಗುಜರಾತ್, ಹಿಮಾಚಲ ಮತ್ತು ತೆಲಂಗಾನ ಪ್ರವಾಸೋದ್ಯಮವಲ್ಲದೆ ಒಮನ್ ಮತ್ತು ದುಬೈಯ ಡಿಎಂಸಿಗಳು ಪಾಲ್ಗೊಂಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಮಾಹಿತಿ ನೀಡಲಿದೆ.

ಅಪ್ನ ಹಾಲಿಡೇಸ್, ಬಿಐಟಿ ಟ್ರಾವೆಲ್ಸ್, ನಿರ್ಮಲ ಟ್ರಾವೆಲ್ಸ್, ವಿಕ್ರಮ್ ಟ್ರಾವೆಲ್ಸ್, ವೀಣಾ ವರ್ಲ್ಡ್, ಮಾಝಾಯ್ ಟೂರ್ಸ್‌ ಅಲ್ಲದೆ ಕಂಟ್ರಿ ಇನ್‌ನಂತಹ ಹೊಟೇಲ್‌ಗಳು ಯೆಲ್ಲೊ ಬ್ಯಾಂಬೊನಂತಹ ರೆಸೋರ್ಟ್‌ಗಳು, ಅವರ ಪ್ಯಾಕೇಜ್‌ಗಳು, ಸರ್ವಿಸ್ ಮತ್ತಿತರ ಸೇವೆಗಳ ಮಾಹಿತಿ ಒದಗಿಸಲಿದ್ದಾರೆ. ವಿವಿಧ ಅತ್ಯಾಕರ್ಷಣೀಯ ಪ್ರವಾಸೋದ್ಯಮ ಪ್ಯಾಕೇಜ್‌ಗಳ ಮಾಹಿತಿ ನೀಡಲಾಗುತ್ತಿದೆ. ನ.4ರವರೆಗೆ ಪೂ.11 ರಿಂದ ರಾತ್ರಿ 7:30ರವರೆಗೆ ಪ್ರದರ್ಶನ-ಮಾಹಿತಿ ಲಭ್ಯವಾಗಲಿದೆ.

ಈ ಸಂದರ್ಭ ಐಐಟಿಇ ಬೆಂಗಳೂರಿನ ನಿರ್ದೇಶಕ ಅನುರಾಗ್ ಗುಪ್ತಾ, ಅಪ್ನಾ ಹೋಲಿಡೇಸ್‌ನ ನಾಗರಾಜ್ ಹೆಬ್ಬಾರ್, ನಿರ್ಮಲಾ ಟ್ರಾವೆಲ್ಸ್‌ನ ನಿರ್ದೇಶಕಿ ವಾಟಿಕಾ ಪೈ, ಕಲ್ಕೂರಾ ಜಾಹೀರಾತು ಸಂಸ್ಥೆಯ ಪ್ರಬಂಧಕ ಎಂ. ನಾರಾಯಣ ಭಟ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News