ನ.5ರ ಪ್ರತಿಭಟನೆ ಮುಂದೂಡಿಕೆ
Update: 2018-11-02 20:14 IST
ಮಂಗಳೂರು, ನ.2: ಕುದ್ರೋಳಿಯ ಕಸಾಯಿಖಾನೆಯನ್ನು ಆಧುನೀಕರಿಸಲು ಒತ್ತಾಯಿಸಿ ಮತ್ತು ಬಿಜೆಪಿ ಹಾಗೂ ಸಂಘಪರಿವಾರ ಜನತೆಯ ಆಹಾರದ ಹಕ್ಕಿಗೆ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಸಮಾನಮನಸ್ಕ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳು ಜೊತೆಗೂಡಿ ರಚಿಸಲಾದ ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿಯ ವತಿಯಿಂದ ನ.5ರಂದು ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಸಮಿತಿಯ ಸಂಯೋಜಕ ಸುನೀಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.