×
Ad

ರಫೇಲ್ ಹಗರಣ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಲಿ- ಸಚಿವ ಯು.ಟಿ.ಖಾದರ್‌

Update: 2018-11-02 20:18 IST

ಮಂಗಳೂರು, ನ.2: ರಪೇಲ್ ಡೀಲ್ ಪ್ರಕರಣವನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ.ಈ ಪ್ರಕರಣದ ಸಮಗ್ರ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಧ್ಯರಾತ್ರಿ ಸಿಬಿಐ ನಿರ್ದೇಶಕರನ್ನು ರಜೆ ಮೇಲೆ ಕಳುಹಿಸುವ ಹಿಂದೆ ದೇಶದ ಅತ್ಯಂತ ದೊಡ್ಡ ಭ್ರಷ್ಟಾಚಾರ ಪ್ರಕರಣವನು ಮುಚ್ಚ ಹಾಕುವ ಸಂಚಿನ ಭಾಗವಾಗಿದೆ ಮತ್ತು ಈ ಹಗರಣದಿಂದ ಕರ್ನಾಟಕದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಾದ ಎಚ್‌ಎ.ಎಲ್‌ಗೆ ಕೋಟ್ಯಾಂತರ ರೂ ಕೈ ತಪ್ಪಿ ಹೋಗುವಂತಾಗಿದೆ. ರಫೇಲ್ ಹಗರಣದ ಬಗ್ಗೆ ಜನರಿಗೆ ಮಾಹಿತಿ ನೀಡುವ ಹೊಣೆಗಾರಿಕೆ ಕೇಂದ್ರ ಸರಕಾರಕ್ಕಿದೆ. ಪ್ರಧಾನಿ ಆಕಾಶವಾಣಿಯಲ್ಲಿ ಮುಖ ಮುಚ್ಚಿ ಮನಕಿ ಭಾತ್ ಕಾರ್ಯಕ್ರಮ ನೀಡುವ ಬದಲು ಜನರ ಮುಂದೆ ನೇರವಾಗಿ ಬಂದು ಮಾತನಾಡಲಿ. ಬಾಯಲ್ಲಿ ಸ್ವದೇಶಿ ಕಾರ್ಯದಲ್ಲಿ ವಿದೇಶಿ ತಂತ್ರಜ್ಞಾನಕ್ಕೆ ಬೆಂಬಲ ಎನ್ನುವಂತಾಗಿದೆ ಮೋದಿಯವರ ನಿಲುವು ಎಂದು ಸಚಿವ ಯು.ಟಿ.ಖಾದರ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News